ನ್ಯಾಷನಲ್ ಕ್ರಷ್: ಇನ್ಸ್ಟಾಗ್ರಾಮ್ ನಿಂದಲೂ ಭರ್ಜರಿ ಕಮಾಯಿ.!

ನ್ಯಾಷನಲ್ ಕ್ರಷ್: ಇನ್ಸ್ಟಾಗ್ರಾಮ್ ನಿಂದಲೂ ಭರ್ಜರಿ ಕಮಾಯಿ.!

ಬೆಂಗಳೂರು: ನಟಿ ರಶ್ಮಿಕಾ ಮಂದಣ್ಣ ಅವರಿ ಇಡೀ ದೇಶದ್ಯಾಂತ ಹೆಚ್ಚು ಅಭಿಮಾನಿ ಬಳಗ ಹೊಂದಿದ್ದಾರೆ. ಅವರು ಬೇಡಿಕೆಯ ನಟಿ ಆಗಿದ್ದಾರೆ. ಕನ್ನಡ, ತೆಲುಗು, ಹಿಂದಿ ಹಾಗೂ ತಮಿಳು ಚಿತ್ರರಂಗದಲ್ಲಿ ಅವರಿಗೆ ಸಖತ್ ಬೇಡಿಕೆ ಇದೆ. ಈ ಎಲ್ಲಾ ಭಾಷೆಗಳಲ್ಲಿ ಅವರ ಹೆಸರು ಪ್ರಚಲಿತದಲ್ಲಿದೆ ಎಂಬುದು ವಿಶೇಷ.

ಸೋಶಿಯಲ್ ಮೀಡಿಯಾದಲ್ಲಿ ರಶ್ಮಿಕಾ ಮಂದಣ್ಣ ಅವರಿಗೆ ಬೇಡಿಕೆ ಹೆಚ್ಚಿದೆ. ಇನ್ಸ್ಟಾಗ್ರಾಮ್ನಲ್ಲಿ ಅವರನ್ನು ಸುಮಾರು ನಾಲ್ಕು ಕೋಟಿ ಜನರು ಹಿಂಬಾಲಿಸುತ್ತಿದ್ದಾರೆ. ಈ ಸಂಖ್ಯೆ ದಿನ ಕಳೆದಂತೆ ಹಿರಿದಾಗುತ್ತಲೇ ಇದೆ. ಅವರ ಪ್ರತಿ ಫೋಟೋಗೆ 10+ ಲಕ್ಷ ಲೈಕ್ಸ್ ಸಿಗುತ್ತದೆ.

ರಶ್ಮಿಕಾ ಮಂದಣ್ಣ ಅವರಿಗೆ ಸೋಶಿಯಲ್ ಮೀಡಿಯಾದಿಂದಲೂ ಭರ್ಜರಿ ಹಣ ಬರುತ್ತಿದೆ. ಹೌದು, ಅವರು ಹಲವು ಬ್ರ್ಯಾಂಡ್ಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪ್ರಚಾರ ಮಾಡುತ್ತಾರೆ. ಇದಕ್ಕೆ ಅವರು ದೊಡ್ಡ ಮೊತ್ತದ ಹಣ ಪಡೆಯುತ್ತಾರೆ.

ರಶ್ಮಿಕಾ ಮಂದಣ್ಣ ಅವರು ಪ್ರತಿ ಚಿತ್ರಕ್ಕೆ ದೊಡ್ಡ ಮೊತ್ತದ ಸಂಭಾವನೆ ಪಡೆಯುತ್ತಾರೆ. ಇದರ ಜೊತೆಗೆ ಹಲವು ಬ್ರ್ಯಾಂಡ್ಗಳ ಪ್ರಮೋಷನ್ ಮಾಡುತ್ತಾರೆ. ಇದಕ್ಕೆ ಪ್ರತಿಯಾಗಿ ಅವರು ಹಣ ಪಡೆಯುತ್ತಾರೆ. ಅವರು ಹಲವು ಕಡೆಗಳಲ್ಲಿ ಮನೆ ಹೊಂದಿದ್ದಾರೆ.

ರಶ್ಮಿಕಾ ಮಂದಣ್ಣ ಅವರು ‘ಪುಷ್ಪ 2’, ‘ಅನಿಮಲ್’ ಮೊದಲಾದ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ‘ಅನಿಮಲ್’ ಸಿನಿಮಾ ಡಿಸೆಂಬರ್ 1ರಂದು ರಿಲೀಸ್ ಆಗಲಿದೆ. ಈ ಚಿತ್ರದ ಪ್ರಚಾರದಲ್ಲಿ ಅವರು ಬ್ಯುಸಿ ಇದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos