ಬಿದಿಗೆ ಕಸ ಸುರಿಯೋರಿಗೆ ಅದೇ ಕಸದಿಂದ ಹಾರ ಹಾಕಿ: ಪುಷ್ಪಾ ಮಂಜುನಾಥ್

ಬಿದಿಗೆ ಕಸ ಸುರಿಯೋರಿಗೆ ಅದೇ ಕಸದಿಂದ ಹಾರ ಹಾಕಿ: ಪುಷ್ಪಾ ಮಂಜುನಾಥ್

ಬೆಂಗಳೂರು, ಸೆ. 17: ಸಂಚಾರಿ ಪೊಲೀಸರ ಮಾದರಿಯಲ್ಲಿ  ಬಿಬಿಎಂಪಿ ಅಧಿಕಾರಿಗಳೂ ಸಹ ಸಿಕ್ಕಾಪಟ್ಟೆ ದಂಡ ಹಾಕಲು ಆರಂಬಿಸಿದ್ದಾರೆ,,,, ತಡರಾತ್ರಿ ಡ್ರೈವ್ ಆರಂಬಿಸಿದ್ದು. ಎಲ್ಲಂದರಲ್ಲಿ ಕಸ‌ಹಾಕೊರಿಗೆ ದಂಡ ವಿದಿಸುತ್ತಿದ್ದಾರೆ ಅಷ್ಟೆ ಅಲ್ಲ ಬ್ಲಾಕ್ ಸ್ಪಾಟ್ ಗಳಲ್ಲಿ ಕಸ ಸುರಿಯೋರಿಗೆ ಅದೇ ಕಸದಿಂದ ಹಾರ ಹಾಕಿ ಎಂದು ವರ್ತೂರು‌ ವಾರ್ಡ್ ಪಾಲಿಕೆ‌ ಸದಸ್ಯೆ ಪುಷ್ಪಾ ಮಂಜುನಾಥ್ ಕಡಕ್ ಸೂಚನೆ ನೀಡಿದ್ದಾರೆ.

ಸ್ವಚ್ಚ ಬೆಂಗಳೂರು ಮಾಡಲು ಬಿಬಿಎಂಪಿ ಅಧಿಕಾರಿಗಳು ನೈಟ್ ರೈಡ್ ಆರಂಬಿಸಿದ್ದು, ಮಹದೇವಪುರ ಕ್ಷೇತ್ರದ ವರ್ತೂರು ವಾರ್ಡ್ ನ ಬ್ಲಾಕ್ ಸ್ಪಾಟ್ ನಲ್ಲಿ ಕಸ ಹಾಕಿದ ಹೊಟಲ್ ಮಾಲೀಕರೊಬ್ಬರಿಗೆ ಬರೊಬ್ಬರಿ 10 ಸಾವಿರ ದಂಡ ಹಾಕಿದರು.

ಎಇಇ ಎಂ ಎಸ್ ಮಮತಾ ನೇತೃತ್ವದಲ್ಲಿ ವರ್ತೂರು, ವಾರ್ಡ್ ನ ವಿವಿದ ಬಡಾವಣೆಗಳಲ್ಲಿ ಇಡೀ ರಾತ್ರಿ  ಡ್ರೈವ್ ನಡೆಸಿದರು, ಸ್ಥಳೀಯ ಪಾಲಿಕೆ ಸದಸ್ಯೆ ಪುಷ್ಪ ಮಂಜುನಾಥ್ ಸಹ ತಡ ರಾತ್ರಿ ವರೆಗೂ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಎಲ್ಲಂದರಲ್ಲಿ ಕಸ ಸುರಿಯೋರಿಗೆ ಹಿಡಿದು ದಂಡದ ಜೊತೆಗೆ ಅವರು ತಂದ ಕಸವನ್ನು ಅವರ ಕತ್ತಿನಲ್ಲೇ ಹಾಕುವಂತೆ ಅಧಿಕಾರಿಗಳಿಗೆ ಸೂಚಿಸಿದರು.

 

ಫ್ರೆಶ್ ನ್ಯೂಸ್

Latest Posts

Featured Videos