ಬಿಬಿಎಂಪಿಯಿಂದ ಪ್ಲಾಸ್ಟಿಕ್ ಸ್ವೀಕರಿಸಿದ ಬಿಐಎಎಲ್

ಬಿಬಿಎಂಪಿಯಿಂದ ಪ್ಲಾಸ್ಟಿಕ್ ಸ್ವೀಕರಿಸಿದ ಬಿಐಎಎಲ್

ದೇವನಹಳ್ಳಿ, ಆ. 27: ಪರಿಸರ ಸಂರಕ್ಷಣೆ ಮತ್ತು ಮುಂದುವರಿಕೆ ಅಭಿಯಾನಕ್ಕೆ ಹೆಚ್ಚಿನಆದ್ಯತೆ ನೀಡುವುದಕ್ಕಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು(ಬಿಎಲ್‌ಆರ್ ವಿಮಾನ ನಿಲ್ದಾಣ)ಈಗ ಸುಮಾರು 11 ಟನ್‌ಗಳಷ್ಟು ಪ್ಲಾಸ್ಟಿಕ್ ತ್ಯಾಜ್ಯವನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯಿಂದ ಸ್ವೀಕರಿಸಲಿದೆ. ಈ ಪ್ಲಾಸ್ಟಿಕ್ ಅನ್ನು ವಿಮಾನ ನಿಲ್ದಾಣಆವರಣದ ಒಳಗಿನ ರಸ್ತೆಗಳನ್ನು ನಿರ್ಮಿಸುವ ಕಾರ್ಯಗಳಿಗಾಗಿ ಬಿಐಎಎಲ್‌ ಬಳಕೆ ಮಾಡಲಿದೆ. ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕೇವಲ ಒಂದು ಬಾರಿಮಾತ್ರ ಬಳಸುವ ಪ್ಲಾಸ್ಟಿಕ್ ಅನ್ನು ನಿಷೇಧಿಸುವುದರೊಂದಿಗೆ ಪ್ಲಾಸ್ಟಿಕ್ ನಿರ್ವಹಣೆಯತ್ತ ಬಿಐಎಎಲ್ ಈಗಾಗಲೇ ಮೊದಲ ಹೆಜ್ಜೆಯಿಟ್ಟಿದೆ. ಬಿಬಿಎಂಪಿ ಆಯುಕ್ತ ಮಂಜುನಾಥ್‌ ಪ್ರಸಾದ್ ಪ್ಲಾಸ್ಟಿಕ್ ಅನ್ನು ಬಿಐಎಎಲ್‌ ನ ತಂಡಕ್ಕೆ ಹಸ್ತಾಂತರಿಸಲಾಯಿತು.

ಬೆಂಗಳೂರು ಮಹಾನಗರ ಪಾಲಿಕೆ ಮೇಯರ್ ಗಂಗಾಭಿಕ ಮಾತನಾಡಿ, ಪ್ಲಾಸ್ಟಿಕ್‌ ನಿಂದ ಸಾಕಷ್ಟು ತೊಂದರೆಗಳು ಆಗುತ್ತಿವೆ. ಭೂಮಿಯೊಳಗೆ ಪ್ಲಾಸ್ಟಿಕ್ ಹೋಗುವುದರಿಂದ ಅಂತರ್‌ ಜಲ ಮಟ್ಟ ಕುಸಿಯುತ್ತದೆ. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಉತ್ತಮ ಕಾರ್ಯವನ್ನು ಮಾಡುತ್ತಿರುವುದು ಶ್ಲಾಘನೀಯ. ಪ್ಲಾಸ್ಟಿಕ್ ನಿಂದ ಪರಿಸರದ ಅಂದಚೆಂದ ಹಾಳಾಗುತ್ತಿದೆ ಎಂದು ಹೇಳಿದರು. ಜವಾಬ್ಧಾರಿಯುತ ಸಂಸ್ಥೆಯಾಗಿ ಪರಿಸರಅಭಿವೃದ್ಧಿ ಹಾಗೂ ಸುಸ್ಥಿರತೆಯೆಡೆಗೆ ಗಮನ ಕೇಂದ್ರೀಕರಿಸಿರುವ ಹಾಗೂ ಬೆಂಗಳೂರು ವಿಮಾನ ನಿಲ್ದಾಣದ ಕಾರ್ಯಾಚರಣೆ ನಿರ್ವಹಿಸುತ್ತಿರುವ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿಯಮಿತ(ಬಿಐಎಎಲ್)ಗೆ ಸುಮಾರು 50 ಪಥ-ಕೆಎಂರಷ್ಟುಆಂತರಿಕ ರಸ್ತೆಗಳನ್ನು ನಿರ್ಮಿಸಲು 50 ಟನ್‌ ಗಳಿಗೂ ಹೆಚ್ಚಿನ ಪ್ಲಾಸ್ಟಿಕ್‌ನ ಅಗತ್ಯವಿರುತ್ತದೆ. ಬಿಐಎಎಲ್‌ ಇತ್ತೀಚೆಗೆ ಪ್ಲಾಸ್ಟಿಕ್ ಅನ್ನು ಬಿಟು ಮೆನ್‌ ಜೊತೆಗೆ ಮಿಶ್ರಣಮಾಡಿ ಪ್ರಯೋಗಾಲಯ ಪರೀಕ್ಷೆಗಳನ್ನು ನಡೆಸಿತ್ತು. ಸ್ವೀಕಾರಾರ್ಹ ಮಿತಿಗಳಲ್ಲಿ ಫಲಿತಾಂಶಗಳು ಬಂದಿದ್ದವು. ಕೇವಲ ಆಸ್‌ಫಾಲ್ಟ್ಗೆ ಹೋಲಿಸಿದರೆ ಪಾಲಿಮರೈಸ್ಡ್ರಸ್ತೆದೃಢವಾದ ಬಂಧನಕಾರಕ ಸಾಮರ್ಥ್ಯ ಹೊಂದಿದ್ದು, ವಿಪರೀತ ಹವಾಮಾನ ಸ್ಥಿತಿಗಳನ್ನು ತಡೆದುಕೊಳ್ಳಬಲ್ಲದು. ಸಾಧಾರಣ ರಸ್ತೆಗಳು 3 ವರ್ಷಗಳ ಕಾಲ ಉಳಿದುಕೊಳ್ಳುವ ನಿರೀಕ್ಷೆಇದ್ದರೆ, ಪ್ಲಾಸ್ಟಿಕ್ ಮಿಶ್ರಿತ ರಸ್ತೆಗಳು ದೀರ್ಘಬಾಳಿಕೆ ಹೊಂದಿವೆ. ಹೆಚ್ಚುವರಿಯಾಗಿ ಫಾಲಿಮರೈಸ್ಡ್ ರಸ್ತೆಗಳು ಪ್ಲಾಸ್ಟಿಕ್‌ ನ ಹಾವಳಿಯನ್ನು ನಿಭಾಯಿಸಲು ಅತ್ಯಂತಜನಪ್ರಿಯ ಮತ್ತು ಪರಿಸರ ಸ್ನೇಹಿ ದೃಢಪರಿಹಾರಗಳಾಗಿ ಬೆಳಕಿಗೆ ಬರುತ್ತಿವೆ. ಇಂಗಾಲದ ಹೆಜ್ಜೆಗುರುತನ್ನುಕಡಿಮೆ ಮಾಡುವಲ್ಲಿ ಇದು ಬಹುದೂರ ಸಾಗಲಿದೆ.

ಈ ಸಂದರ್ಭದಲ್ಲಿ ಬಿಬಿಎಂಪಿಯ ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷಾಯುಕ್ತ ರಂದೀಪ್‌ಡಿ, ಬಿಬಿಎಂಪಿಯ ಆರೋಗ್ಯ ವಿಶೇಷಾಯುಕ್ತ ರವಿಕುಮಾರ್ ಸುರ್‌ಪುರ್ ಮತ್ತಿತರರು ಇದ್ದರು.

 

ಫ್ರೆಶ್ ನ್ಯೂಸ್

Latest Posts

Featured Videos