ಅರುಣಾಚಲಪ್ರದೇಶ, ಅಸ್ಸಾಂನಲ್ಲಿ ಭೂಕಂಪನ

ಅರುಣಾಚಲಪ್ರದೇಶ, ಅಸ್ಸಾಂನಲ್ಲಿ ಭೂಕಂಪನ

ಅರುಣಾಚಲಪ್ರದೇಶ, ಏ. 24, ನ್ಯೂಸ್ ಎಕ್ಸ್ ಪ್ರೆಸ್: ಅಸ್ಸಾಂ, ಅರುಣಾಚಲಪ್ರದೇಶ, ಚೀನಾದ ಗಡಿಭಾಗ, ಟಿಬೆಟಿಯನ್ ಮತ್ತು ಮಯನ್ಮಾರ್ನಲ್ಲಿ ಭೂಮಿ ನಡುಗಿದೆ. ಅಮೆರಿಕಾ ಜಿಯೊಲಾಜಿಕಲ್ ಸರ್ವೇ ಪ್ರಕಾರ ಈಶಾನ್ಯ ಭಾರತದಲ್ಲಿ ಭೂಕಂಪನದ ತೀವ್ರತೆ ರಿಕ್ಟರ್ ಮಾಪಕದಲ್ಲಿ 6.1 ರಷ್ಟು ಇದೆ ಅಂತಾ ಮಾಹಿತಿ  ನೀಡಿದೆ.

ಅಸ್ಸಾಂನ ದಿಬ್ರುಗರ್ ಪಟ್ಟಣ ಭೂಕಂಪನದ ಕೇಂದ್ರ ಬಿಂದುವಾಗಿದ್ದು, ಇಲ್ಲಿನ ಸುತ್ತಮುತ್ತ 114 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಭೂಮಿ ಕಂಪಿಸಿದೆ. ರಿಕ್ಟರ್ ಮಾಪಕದಲ್ಲಿ ಈ ಭಾಗದಲ್ಲಿ 5.9 ರಷ್ಟು ತೀವ್ರತೆ ದಾಖಲಾಗಿದೆ ಅಂತಾ ಯುಎಸ್ ಜಿಎಸ್ ಹೇಳಿದೆ.

ಮಧ್ಯರಾತ್ರಿ 1.45 ರ ಸುಮಾರಿಗೆ ಭೂಮಿ ನಡುಗಿದೆ. ಅರುಣಾಚಲ ಪ್ರದೇಶದ ವೆಸ್ಟ್ ಸಿಯಾಂಗ್ ಭೂಕಂಪನದ ಕೇಂದ್ರ ಬಿಂದು, ರಿಕ್ಟರ್ ಮಾಪಕದಲ್ಲಿ ಕಂಪನದ ತೀವ್ರತೆ 5.8 ರಷ್ಟಿದೆ ಅಂತಾ ಹೇಳಿದೆ.

ಚೀನಾದ ನ್ಯೂಸ್ ಎಜೆನ್ಸಿಗಳೂ ಕೂಡ ಟಿಬೆಟಿಯನ್ ವಿವಿಧ ಭಾಗಗಳಲ್ಲಿ ಭೂಮಿ ಕಂಪಿಸಿದ ಅನುಭವ ಆಗಿದೆ ಅಂತಾ ವರದಿ ಮಾಡಿವೆ. ಇತ್ತ ನೇಪಾಳದಲ್ಲೂ ಭೂಮಿ ನಡುಗಿರುವ ಬಗ್ಗೆ ವರದಿಯಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos