ಭೋಜನ ಪ್ರಿಯರಿಗೆ ಬಂಪರ್

ಭೋಜನ ಪ್ರಿಯರಿಗೆ ಬಂಪರ್

ಮೈಸೂರು, ಸೆ. 7: ದಸರಾ ನಿಮಿತ್ಯ ಈ ಬಾರಿ ಭೋಜನ ಪ್ರಿಯರ ವಿದೇಶ ಖಾದ್ಯ ಸವಿಯ ಬಹುದು. ವಿಭಿನ್ನ-ವಿಶೇಷ ಆಹಾರ ಪದಾರ್ಥಗಳಿಗೆ ಹೆಚ್ಚಿನ ಆದ್ಯತೆ ನೀಡುವಲ್ಲಿ ಈ ಬಾರಿ ಜಿಲ್ಲಾಡಳಿತ ಮುಂದಾಗಿದೆ. ಸೆ. 29ರಿಂದ ಅಕ್ಟೋಬರ್ 10ರವರಗೆ ನಗರದ ಸ್ಕೌಟ್ಸ್ ಮತ್ತು ಗೈಡ್ಸ್ ಮೈದಾನ ಹಾಗೂ ಲಲಿತ ಮಹಲ್ ಹೆಲಿಪ್ಯಾಡ್ ಸಮೀಪದ ಮೂಡ ಮೈದಾದಲ್ಲಿ ದಸರಾ ಆಹಾರ ಮೇಳ ನಡೆಯಲಿದೆ.
ಉತ್ತರ ಮತ್ತು ದಕ್ಷಿಣ ಕರ್ನಾಟಕ, ಮಲೆನಾಡು, ಕರಾವಳಿ, ಟಿಬೇಟಿಯನ್ ಸೇರಿದಂತೆ ರಾಜಸ್ಥಾನ, ಗುಜರಾತಿ, ಹೈದರಾಬಾದ್, ಕೇರಳ, ತಮಿಳುನಾಡು, ಅಸ್ಸಾಂ, ಪಂಜಾಬ್, ಕಾಶ್ಮೀರ ರಾಜ್ಯಗಳ ಖಾದ್ಯಗಳೊಂದಿಗೆ ಈ ಬಾರಿ ವಿಶೇಷವಾಗಿ ಇಟಾಲಿಯನ್, ಫ್ರೆಂಚ್, ಮೆಕ್ಸಿಕನ್ ಹಾಗೂ ಚೈನಿಸ್ ತಿನಿಸುಗಳು ದೊರೆಯಲಿವೆ.

ಫ್ರೆಶ್ ನ್ಯೂಸ್

Latest Posts

Featured Videos