ಭಾರತಕ್ಕೆ ತಿರುಗೇಟು ನೀಡುವಲ್ಲಿ ಆಫ್ರಿಕಾ ದಾಪುಗಾಲು

ಭಾರತಕ್ಕೆ ತಿರುಗೇಟು ನೀಡುವಲ್ಲಿ ಆಫ್ರಿಕಾ ದಾಪುಗಾಲು

ಬೆಂಗಳೂರು, ಅ. 4 : ವಿಶಾಖಪಟ್ಟಣಂನ ಡಾ. ವೈಎಸ್ ರಾಜಶೇಖರ ರೆಡ್ಡಿ ಕ್ರೀಡಾಂಗಣದಲ್ಲಿ ಸಾಗುತ್ತಿರುವ ಮೊದಲ ಟೆಸ್ಟ್ನಲ್ಲಿ ದಕ್ಷಿಣ ಆಫ್ರಿಕಾ ಭಾರತಕ್ಕೆ ತಿರುಗೇಟು ನೀಡುತ್ತಿದೆ.
ಆಕರ್ಷಕ ಶತಕ ಸಿಡಿಸಿ ಎಲ್ಗರ್ ಔಟ್ ಆದರೆ, ಡಿಕಾಕ್ ಸೆಂಚುರಿಯತ್ತ ದಾಪುಗಾಲಿಡುತ್ತಿದ್ದಾರೆ. ಡೇನ್ ಎಲ್ಗರ್ 287 ಎಸೆತಗಳಲ್ಲಿ 18 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿ 160 ರನ್ ಕಲೆಹಾಕಿದರು. ಡಿಕಾಕ್ ಹಾಗೂ ಎಲ್ಗರ್ ಖಾತೆಯಿಂದ ಅಮೋಘ 164 ರನ್ಗಳ ಜೊತೆಯಾಟ ಮೂಡಿಬಂತು. ನಿನ್ನೆ 2ನೇ ದಿನದಾಟದ ಅಂತ್ಯಕ್ಕೆ 3 ವಿಕೆಟ್ ಕಳೆದುಕೊಂಡು ಆಫ್ರಿಕಾ 39 ರನ್ ಕಲೆಹಾಕಿತ್ತು. ಡೇನ್ ಎಲ್ಗರ್ ಹಾಗೂ ತೆಂಬಾ ಬವುಮಾ ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದರು. ಇಂದು ದಿನದ ಆರಂಭದಲ್ಲೆ ಬವುಮಾ 18 ರನ್ ಗಳಿಸಿದ್ದಾಗ ಇಶಾಂತ್ ಶರ್ಮಾ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಸಿಲುಕಿದರು. ಈ ಸಂದರ್ಭ ಎಲ್ಗರ್ ಹಾಗೂ ನಾಯಕ ಫಾಫ್ ಡುಪ್ಲೆಸಿಸ್ ತಂಡಕ್ಕೆ ಆಸರೆಯಾಗಿ ನಿಂತರು.
ಎಚ್ಚರಿಕೆಯ ಆಟ ಪ್ರದರ್ಶಿಸಿದ ಈ ಜೋಡಿ 115 ರನ್ಗಳ ಅಮೋಘ ಜೊತೆಯಾಟ ಆಡಿತು. ಆದರೆ, ಡುಪ್ಲೆಸಿಸ್ಗೆ ಅಶ್ವಿನ್ ಮಾರಕವಾಗಿ ಪರಿಣಮಿಸಿದರು. 103 ಎಸೆತಗಳಲ್ಲಿ 55 ರನ್ ಗಳಿಸಿದ್ದ ವೇಳೆ ಫಾಪ್ ಔಟ್ ಆದರು. ಇತ್ತ ಎಲ್ಗರ್ ಟೆಸ್ಟ್ ಕ್ರಿಕೆಟ್ನಲ್ಲಿ 13ನೇ ಶತಕ ಪೂರೈಸಿದರು. ಬಳಿಕ ಡಿಕಾಕ್ ಜೊತೆಯಾಗಿರುವ ಎಲ್ಗರ್ ಮತ್ತೊಂದ್ದು ಅತ್ಯುತ್ತಮ ಇನ್ನಿಂಗ್ಸ್ ಕಟ್ಟಿದರು. 164 ರನ್ಗಳ ಜೊತೆಯಾಟ ಆಡಿದರು. ಆದರೆ, ಎಲ್ಗರ್ 200ರ ಗಡಿ ದಾಟುವಲ್ಲಿ ವಿಫಲರಾದರು.
ಇದಕ್ಕೂ ಮೊದಲು ಟೀಂ ಇಂಡಿಯಾ ಪರ ಮಯಾಂಕ್ ಅಗರ್ವಾಲ್ 215 ಹಾಗೂ ರೋಹಿತ್ ಶರ್ಮಾ 176 ರನ್ಗಳ ಅಮೋಘ ಆಟದ ನೆರವಿನಿಂದ 7 ವಿಕೆಟ್ ಕಳೆದುಕೊಂಡು 502 ರನ್ ಬಾರಿಸಿ ಆಫ್ರಿಕನ್ನರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಮಾಡಿಕೊಟ್ಟರು.

ಫ್ರೆಶ್ ನ್ಯೂಸ್

Latest Posts

Featured Videos