ಭಾರತ ,ಪಾಕ್ ನಲ್ಲಿ ಭೂಕಂಪನ

 ಭಾರತ ,ಪಾಕ್ ನಲ್ಲಿ ಭೂಕಂಪನ

ನವದೆಹಲಿ, ಇಸ್ಲಾಮಾಬಾದ್, ಸೆ. 25 : ಭಾರತ ಮತ್ತು ವೈರಿ ರಾಷ್ಟ್ರ ಪಾಕಿಸ್ತಾನದಲ್ಲಿ 6.3 ತೀವ್ರತೆಯ ಭೂಕಂಪನ ಸಂಭವಿಸಿದೆ ಎನ್ನಲಾಗಿದೆ.ಉತ್ತರ ಭಾರತದ ಹಲ ರಾಜ್ಯಗಳು ಮತ್ತು ಪಾಕಿಸ್ತಾನದ ಹಲವು ಭಾಗಗಳಲ್ಲಿ ಮಂಗಳವಾರ ಪ್ರಬಲ ಭೂಕಂಪನ ಸಂಭವಿಸಿದ್ದು, ಪಾಕ್ ಆಕ್ರಮಿತ ಕಾಶ್ಮೀರದಲ್ಲಿನ ಭೂಕಂಪದ ಘಟನೆಯಲ್ಲಿ 20 ಜನ ಸಾವನ್ನಪ್ಪಿ, ೩೦೦ಕ್ಕೂ ಹೆಚ್ಚಿನ ಮಂದಿ ಗಾಯಗೊಂಡಿದ್ದಾರೆ.ರಿಕ್ಟರ್ ಮಾಪಪದಲ್ಲಿ 6.3 ತೀವ್ರತೆಯ ದಾಖಲಾಗಿದೆ  ಎಂದು ಪಾಕ್ ಸರ್ಕಾರ ಹೇಳಿದೆ.

ಸಂಜೆ 4.33 ರ ವೇಳೆಗೆ ಭಾರತದ ಜಮ್ಮು -ಕಾಶ್ಮೀರ, ಪಂಜಾಬ್, ಹರಿಯಾಣ, ಹಿಮಾಚಲ ಪ್ರದೇಶ ಹಾಗೂ ರಾಜಸ್ಥಾನದ ಹಲವು ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.  ಭಾರತ-ಪಾಕ್ ಗಡಿಯಲ್ಲಿ ಭೂಕಂಪದ ಕೇಂದ್ರ ಬಿಂದು ಇದ್ದು, ಪಾಕ್ ಪಂಜಾಬ್ ಪ್ರಾಂತ್ಯದ ರಾವಲ್ಪಿಂಡಿ ಕೇಂದ್ರ ಬಿಂದುವಿಗೆ ಸಮೀಪವಿರುವ ಅತೀ ದೊಡ್ಡ ನಗರ ಎಂದು ಹೇಳಿದೆ.

ಫ್ರೆಶ್ ನ್ಯೂಸ್

Latest Posts

Featured Videos