ಭರ್ಜರಿ `ಕಿಸ್’ ಕೊಟ್ಟ ವಿರಾಟ್!

ಭರ್ಜರಿ `ಕಿಸ್’ ಕೊಟ್ಟ ವಿರಾಟ್!

ಬೆಂಗಳೂರು, ಸೆ. 26 : ಹುಡುಕಾಡಿದರೂ ಡ್ಯಾನ್ಸ್ ಬರೋ ನಾಯಕರ ಸಂಖ್ಯೆ ಬಹಳ ವಿರಳ. ಕುಣಿದಂತೆ ಮಾಡುವವರು ಕೂಡ ತಮ್ಮನ್ನು ತಾವೇ ತಮಾಷೆ ಮಾಡಿಕೊಳ್ಳುತ್ತಾರೆ. ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್ ಅವರಂತಹ ನಟರು ಡ್ಯಾನ್ಸಿನಲ್ಲಿಯೂ ಸೈ ಎನಿಸಿಕೊಂಡಿದ್ದಾರೆ. ಕಿಸ್ ಚಿತ್ರದ ಮೂಲಕವೇ ನಾಯಕನಾಗಿ ಎಂಟ್ರಿ ಕೊಡುತ್ತಿರೋ ವಿರಾಟ್ ಕೂಡ ಆ ಸಾಲಿಗೆ ಸೇರಿಕೊಳ್ಳುವಂಥಾ ನಟನೆಂಬುದರಲ್ಲಿ ಎರಡು ಮಾತಿಲ್ಲ. ಎ.ಪಿ ಅರ್ಜುನ್ ನಿದೇಶನದಲ್ಲಿ ಮೂಡಿ ಬಂದಿರೋ ಕಿಸ್ ಚಿತ್ರ ಆರಂಭ ಕಾಲದಿಂದಲೂ ಸುದ್ದಿ ಮಾಡುತ್ತಲೇ ಬಂದಿತ್ತು. ಆದರೆ ಅದರ ಭರಾಟೆ ಜೋರಾಗಿಯೇ ಶುರುವಾಗಿರುವುದು ಹಾಡುಗಳು ಹೊರ ಬಂದ ನಂತರವೇ. ಕಿಸ್ ಚಿತ್ರದ ಹಾಡುಗಳಲ್ಲಿ ಮೊದಲನೆಯದ್ದಾಗಿ ಹೊರ ಬಂದಿದ್ದು ‘ಶೀಲಾ ಸುಶೀಲ ಯೂ ಡೋಂಟುವರಿ’ ಎಂಬ ಹಾಡು. ಇದರ ಸಂಗೀತ, ಸೌಂಡಿಂಗ್ ಮತ್ತು ದೃಶ್ಯ ವೈಭವ ದೊಡ್ಡ ಮಟ್ಟದಲ್ಲಿಯೇ ಸದ್ದು ಮಾಡಿತ್ತು. ಹೆಚ್ಚು ವೀಕ್ಷಣೆ ಪಡೆದು ಟ್ರೆಂಡಿಂಗ್ನಲ್ಲಿದ್ದ ಈ ಹಾಡಿನಲ್ಲಿ ವಿರಾಟ್ ಮಾಡಿದ್ದ ಸಖತ್ ಡ್ಯಾನ್ಸ್ ಮೂಲಕ ಕಿಸ್ ನೀಡಿರುವುದುರ ಸಖತ್ ನೋಡುಗರೆಲ್ಲ ಫಿದಾ ಆಗಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos