ಭಾರತದ ಕಿರೀಟಕ್ಕೆ ಮತ್ತೊಂದು ಗರಿ

ಭಾರತದ ಕಿರೀಟಕ್ಕೆ ಮತ್ತೊಂದು ಗರಿ

ನವದೆಹಲಿ, . 15, ನ್ಯೂಸ್ ಎಕ್ಸ್ ಪ್ರೆಸ್:  ಒಡಿಶಾ ತೀರದಿಂದ ಇಂದು ನಿರ್ಭಯ್ ಹೆಸರಿನ ಸಬ್ ಸೋನಿಕ್ ಕ್ರೂಸ್ ಮಿಸೈಲ್ ಪರೀಕ್ಷೆ ನಡೆಸಿ ಭಾರತ ಯಶಸ್ವಿಯಾಗಿದೆ. ನಿರ್ಭಯ್, ದೇಶದ ಮೊಟ್ಟಮೊದಲ ದೇಸಿ ನಿರ್ಮಿತ ದೂರವ್ಯಾಪಿ ಕ್ರೂಸ್ ಮಿಸೈಲ್.

ಇದು 1000 ಕಿ.ಮೀ ಸ್ಟ್ರೈಕ್ ರೇಂಜ್ ಹೊಂದಿದೆ. ಡಿಆರ್ಡಿಓ ಅಡಿಯಲ್ಲಿ ಬೆಂಗಳೂರು ಮೂಲದ ಏರೋನಾಟಿಕಲ್ ಡೆವಲಪ್ಮೆಂಟ್ ಎಸ್ಟಾಬ್ಲಿಷ್ಮೆಂಟ್ ಲ್ಯಾಬ್ಬಲ್ಲಿ ಈ ಕ್ಷಿಪಣಿಯನ್ನ ಅಭಿವೃದ್ಧಿಪಡಿಸಲಾಗಿದೆ.

ಈ ಕ್ಷಿಪಣಿಯನ್ನ ವಿವಿಧ ಪ್ಲಾಟ್ಫಾರ್ಮ್ಗಳ ಮೂಲಕ ಉಡಾವಣೆ ಮಾಡಬಹುದು. ಸಾಮಾನ್ಯ ಅಸ್ತ್ರಗಳು ಹಾಗೂ ಅಣ್ವಸ್ತ್ರಗಳನ್ನು ಹೊತ್ತೊಯ್ಯುವಂತೆ ಕ್ಷಿಪಣಿಯನ್ನ ವಿನ್ಯಾಸಗೊಳಿಸಲಾಗಿದೆ. 300 ಕೆ.ಜಿ ತೂಕದ ಅಸ್ತ್ರಗಳನ್ನ ಇದರಲ್ಲಿ ಅಳವಡಿಸಬಹುದು. ಅಣ್ವಸ್ತ್ರ ಸಾಮರ್ಥ್ಯ ಹೊಂದಿರೋ ನಿರ್ಭಯ್, 0.6 ರಿಂದ 0.7 ಮ್ಯಾಕ್ (ಗಂಟೆಗೆ ಸುಮಾರು 740ರಿಂದ 864 ಕಿ.ಮೀ) ವೇಗದಲ್ಲಿ ಹೋಗಬಲ್ಲದ್ದಾಗಿದೆ.

1 ಸಾವಿರ ಕಿಲೋಮೀಟರ್ ದೂರದಿಂದ ಟಾರ್ಗೆಟ್ ಹೊಡೆದುಹಾಕಬಲ್ಲ ಸಾಮರ್ಥ್ಯ ಹೊಂದಿದೆ.

ಇನ್ನು ಈ ಕ್ಷಿಪಣಿ 1500 ಕೆ.ಜಿ ತೂಕವಿದ್ದು, 24 ವಿವಿಧ ಬಗೆಯ ಅಸ್ತ್ರಗಳನ್ನ ಪ್ರಯೋಗಿಸಬಲ್ಲದು. ಶತ್ರು ದೇಶದ ರಡಾರ್ ಇದನ್ನ ಪತ್ತೆಹಚ್ಚದ ರೀತಿಯಲ್ಲಿ ಕಡಿಮೆ ಎತ್ತರದಲ್ಲೂ ಹಾರಾಟ ಮಾಡಬಲ್ಲದು. ಅಲ್ಲದೆ ಹಲವಾರು ಟಾರ್ಗೆಟ್ಗಳ ಮಧ್ಯೆ ನಿರ್ದಿಷ್ಟ ಟಾರ್ಗೆಟ್ ಹೊಡೆದುಹಾಕಬಲ್ಲ ಸಾಮರ್ಥ್ಯ ಹೊಂದಿದೆ.

ಫ್ರೆಶ್ ನ್ಯೂಸ್

Latest Posts

Featured Videos