ಭಾರತದಲ್ಲಿ ಜೈಷ್ ಉಗ್ರರಿಂದ ದಾಳಿಗೆ ಸಂಚು: ಗುಪ್ತಚರ ಮಾಹಿತಿ

ಭಾರತದಲ್ಲಿ ಜೈಷ್ ಉಗ್ರರಿಂದ ದಾಳಿಗೆ ಸಂಚು: ಗುಪ್ತಚರ ಮಾಹಿತಿ

ನವದೆಹಲಿ, ಏ. 29, ನ್ಯೂಸ್ ಎಕ್ಸ್ ಪ್ರೆಸ್:  ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆಯೊಂದಿಗೆ ಪಾಕಿಸ್ತಾನದ ಐಎಸ್ ಐ ಏಜೆಂಟ್ ಗಳ ನಿಖರ ಸಂಪರ್ಕವಿದೆ ಹಾಗಾಗಿ ಭಾರತದ ಮೇಲೆ ದಾಳಿ ನಡೆಯುವ ಸಾಧ್ಯತೆ ಇದೆ ಎಂದು ಭಾರತೀಯ ಗುಪ್ತಚರ ಇಲಾಖೆ ಮಾಹಿತಿ ರವಾನಿಸಿದೆ.

ಗೃಹ ಸಚಿವಾಲ ನೀಡಿದ ವರದಿ ಪ್ರಕಾರ ಪಾಕಿಸ್ತಾನದ ಐಎಸ್ ಐ ಏಜೆಂಟ್ಗಳು ಹಾಗೂ ಜೈಷ್-ಎ-ಮೊಹಮ್ಮದ್ ಉಗ್ರ ಸಂಘಟನೆ ಗುಪ್ತ ಸಭೆ ನಡೆಸಿದೆ. ಐಎಸ್ ಐ ಗಳು ಕಾಶ್ಮೀರದಲ್ಲಿ ಪುಲ್ವಾಮಾಕ್ಕಿಂತಲೂ ದೊಡ್ಡ ದಾಳಿಯನ್ನು ಮಾಡಲು ಹೊಂಚುಹಾಕಿದ್ದಾರೆ ಎನ್ನುವ ಮಾಹಿತಿಯನ್ನು ನೀಡಿದೆ.

ಜೈಷ್-ಎ-ಮೊಹಬ್ಬದ್ ಹಾಗೂ ತಾಲಿಬಾನ್ ಉಗ್ರರು ಅಫ್ಘಾನಿಸ್ತಾನದಲ್ಲಿ ನ್ಯಾಟೊ ಮಿಲಿಟರಿ ಫೋರ್ಸ್ ವಿರುದ್ಧ ಫೈಟ್ ಮಾಡುತ್ತಿದೆ. ಇದೀಗ ಪಾಕಿಸ್ತಾನ ಐಎಸ್ ಐ ಹಾಗೂ ಜೈಷ್ ಸಂಘಟನೆಗಳು ಮತ್ತೊಂದು ದಾಳಿ ನಡೆಸಲು ಒಗ್ಗೂಡಿವೆ ಎಂದು ಎಚ್ಚರಿಕೆ ನೀಡಿದೆ.

 

ಫ್ರೆಶ್ ನ್ಯೂಸ್

Latest Posts

Featured Videos