ಭಗತ್‌ಸಿಂಗ್ ಚಿಂತನೆಗಳು ಪ್ರಸ್ತುತ

ಭಗತ್‌ಸಿಂಗ್ ಚಿಂತನೆಗಳು ಪ್ರಸ್ತುತ

ತುಮಕೂರು: ನಕಲಿ ದೇಶಭಕ್ತರು ವಿಜೃಂಭಿಸುತ್ತ ಬ್ರಿಟಿಷರಿಗೆ ಮುಚ್ಚಳಿಕೆ ಪತ್ರ ಬರೆದುಕೊಟ್ಟವರನ್ನು ಆರಾಧಿಸಲಾಗುತ್ತಿದೆ. ದೇಶದ ಯುವಜನರಿಗೆ ಭಗತ್‌ಸಿಂಗ್‌ರ ವೈಜ್ಞಾನಿಕ ಚಿಂತನೆಗಳು ಹಾಗೂ ಅವರ ಸಿದ್ದಾಂತ ಇಂದಿಗೂ ಪ್ರಸ್ತುತ ಎಂದು ಡಿವೈಎಫ್‌ಐ ನಗರಾಧ್ಯಕ್ಷ ದರ್ಶನ್ ತಿಳಿಸಿದರು.
ತುಮಕೂರಿನ ಜನಚಳವಳಿ ಕೇಂದ್ರದಲ್ಲಿ ಸೋಮವಾರ ಸಿಐಟಿಯು ತಾಲೂಕು ಸಮಿತಿ ಆಯೋಜಿಸಿದ್ದ ಕ್ರಾಂತಿಕಾರಿ ಭಗತ್‌ಸಿಂಗ್‌ರ ೧೧೩ ನೇ ಜನ್ಮದಿನ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು. ಭಗತ್ ಸಿಂಗ್ ಅವರ ಸಮಾನತೆಯ ಆಶಯಕ್ಕಾಗಿ ಯುವಜನರು ಹೋರಾಟದ ಹಾದಿಯಲ್ಲಿ ಮುಂದೆ ಸಾಗಬೇಕಾಗಿದೆ ಎಂದರು.
ಸಿಐಟಿಯು ಯುವ ಮುಂದಾಳು ಸುಜಿತ್‌ನಾಯಕ್, ಯುವಜನತೆ ರಚನಾತ್ಮಕವಾದ ಆಲೋಚನೆಗೊಳೊಂದಿಗೆ ಸಮಕಾಲಿನ ಸಮಸ್ಯೆಗಳನ್ನು ಎದುರುಗೊಳ್ಳುತ್ತಲೇ ಹೋರಾಟದ ಮುಂದೆ ಸಾಗಬೇಕಾದ ಅಗತ್ಯವಿದೆ ಎಂದರು.
ಎಸ್‌ಎಫ್‌ಐ ನಗರಾಧ್ಯಕ್ಷ ಲಕ್ಷ್ಮೀಕಾಂತ್ ಮಾತನಾಡಿ, ಔಪಚಾರಿಕ ಪಠ್ಯಕ್ರಮದಲ್ಲಿ ಕ್ರಾಂತಿಕಾರಿಗಳ ಜೀವನ ಚರಿತ್ರೆಯ ಹಾಗೂ ಹೋರಾಟದ ಪರಿಚಯ ಅಗತ್ಯ ಎಂದು ಹೇಳಿದರು.
ಕಾರ್ಮಿಕ ಮುಖಂಡ ರಾಮಕೃಷ್ಣಪ್ಪ ವೇದಿಕೆಯಲ್ಲಿದ್ದರು. ಸಿಐಟಿಯು ತಾಲೂಕು ಕಾರ್ಯದರ್ಶಿ ರಂಗಧಾಮಯ್ಯ ಸ್ವಾಗತಿಸಿ, ಸಹಕಾರ್ಯದರ್ಶಿ ಶಿವಕುಮಾರಸ್ವಾಮಿ ವಂದಿಸಿದರು.

ಫ್ರೆಶ್ ನ್ಯೂಸ್

Latest Posts

Featured Videos