ಭದ್ರತಾ ಸಿಬ್ಬಂದಿ ಮೇಲೆ ಚೀನಾ ಪ್ರವಾಸಿಗ ಹಲ್ಲೆ

ಭದ್ರತಾ ಸಿಬ್ಬಂದಿ ಮೇಲೆ ಚೀನಾ ಪ್ರವಾಸಿಗ ಹಲ್ಲೆ

ಹೊಸಪೇಟೆ, ಸೆ. 23 : ವಿಶ್ವ ಪಾರಂಪರಿಕ ತಾಣ ಹಂಪಿಯಲ್ಲಿನ ಸ್ಮಾರಕ ಏರಲು ಅನುಮತಿ ನಿರಾಕರಿಸಿದ ಹಿನ್ನೆಲೆ ಭದ್ರತಾ ಸಿಬ್ಬಂದಿಯೊಬ್ಬರ ಮೇಲೆ ಚೀನಾದ ಪ್ರವಾಸಿಗರು ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಧರ್ಮರಾಜ ಹಲ್ಲೆಗೊಳ್ಳಾದ ವ್ಯಕ್ತಿ. ಭದ್ರತಾ ಸಿಬ್ಬಂದಿ ಹಂಪಿಯ ಕಮಲ ಮಹಲ್ ಮೇಲ್ಭಾಗಕ್ಕೆ ಪ್ರವೇಶ ನಿರಾಕರಿಸಿದ ಹಿನ್ನಲೆ ಭದ್ರತಾ ಸಿಬ್ಬಂದಿಯ ಕೈಯಲ್ಲಿನ ಗನ್ ಕಿತ್ತುಕೊಂಡು ಹೆದರಿಸುವುದಲ್ಲದೆ, ಭದ್ರತಾ ಸಿಬ್ಬಂದಿ ಧರ್ಮರಾಜ ಎಂಬ ವ್ಯಕ್ತಿಯ ತಲೆಗೆ ಬಂದೂಕಿನ ಹಿಂಭಾಗದಿಂದ ಹಲ್ಲೆ ನಡೆಸಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡ ಧರ್ಮರಾಜ ಸ್ಥಳೀಯ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇತ್ತ ಹಲ್ಲೆ ನಡೆಸಿದ ವಿದೇಶಿಗನಿಗೆ ಹಂಪಿ ಪೊಲೀಸರು ಶೋಧಕಾರ್ಯ ಆರಂಭಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos