ಕ್ರೀಡಾ ಸ್ಪೂರ್ತಿ ಮೆರೆದ ಬಿಎಫ್ ಸಿ

ಕ್ರೀಡಾ ಸ್ಪೂರ್ತಿ ಮೆರೆದ  ಬಿಎಫ್ ಸಿ

ಬೆಂಗಳೂರು,ನ.22: ಹೆರಿಗೆಗೆ ಇನ್ನು ಕೆಲವೇ ದಿನಗಳ ಬಾಕಿ ಇರುವ ಮೇಘನಾ ಎಂಬಾ ಯುವತಿಯೋರ್ವರು , ಬಿಎಫ್ಸಿ ಹಾಗೂ ಕೇರಳ ಬ್ಲಾಸ್ಟರ್ಸ್ ನಡುವೆ ಶನಿವಾರ ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪಂದ್ಯವನ್ನು ಮೈದಾನಕ್ಕೆ ಹೋಗಿ ವೀಕ್ಷಿಸುವ ಆಸೆ ಇಂದ ಟ್ವೀಟರ್ ನಲ್ಲಿ ವಿಶೇಷ ರೀತಿಯಲ್ಲಿ ಪೋಸ್ಟ್ ಮಾಡಿದ್ದಾರೆ.
ಅದೇನೆಂದರೆ ಹೆರಿಗೆಗೆ ಇನ್ನು ಕೆಲವೇ ದಿನಗಳ ಬಾಕಿ ಇರುವ ಅವರಿಗೆ ಆಗಾಗ ಕುಡಿಯಲು ಬಿಸಿ ನೀರು ಬೇಕಾಗುತ್ತದೆ. ಆದರೆ, ಭದ್ರತೆಯ ಕಾರಣಕ್ಕೆ ಮೈದಾನದೊಳಗೆ ಒಂದು ತೊಟ್ಟು ನೀರು ತೆಗೆದುಕೊಂಡು ಹೋಗಲೂ ಬಿಡುವುದಿಲ್ಲ.ಈ ಮೊದಲು ಪಂದ್ಯ ವೀಕ್ಷಣೆಗೆ ಹೋಗಿದ್ದಾಗ ಅವರಿಗೆ ತುಂಬಾ ಕಷ್ಟ ವಾಗಿತ್ತು ,ಆದ್ದರಿಂದ ಮೈದಾನಕ್ಕೆ ಬಿಸಿ ನೀರು ಹಾಗೂ ಔಷಧವನ್ನು ತೆಗೆದು ಕೊಂಡು ಹೋಗುವಂತೆ ಅನುಮತಿ ಕೊಡಿಸಿ ಎಂದು ಅವರ ಟ್ವೀಟರ್ ಖಾತೆಯಲ್ಲಿ ಮನವಿ ಮಾಡಿದ್ದಾರೆ. ಇದ್ದಕ್ಕೆ ಪ್ರತಿಕ್ರಿಯಿಸಿರುವ ಬಿಎಫ್ಸಿ, ‘ತಂಡದ ಮಾಲೀಕರು ಕುಳಿತು ಕೊಳ್ಳುವ ಬಾಕ್ಸ್ ನಲ್ಲೇ ಪಂದ್ಯವನ್ನು ವೀಕ್ಷಿಸಲು ಅವಕಾಶ ನೀಡುವುದಾಗಿ’ ಆಶ್ವಾಸನೆ ಕೊಟ್ಟಿದೆ.

ಫ್ರೆಶ್ ನ್ಯೂಸ್

Latest Posts

Featured Videos