ಸೌಂದರ್ಯವೇ ಮುಳುವಾಯಿತೇ ಈ ನಟಿಗೆ.?

ಸೌಂದರ್ಯವೇ ಮುಳುವಾಯಿತೇ ಈ ನಟಿಗೆ.?

ಕಾಂಬೋಡಿಯನ್, ಮೇ.11, ನ್ಯೂಸ್ ಎಕ್ಸ್ ಪ್ರೆಸ್: ಹೆಣ್ಣು ಮಕ್ಕಳು ಇರೋ ಸೌಂದರ್ಯದ ಜೊತೆಗೆ ಮತ್ತಷ್ಟು ಚೆನ್ನಾಗಿ ಕಾಣಿಸಬೇಕು ಅಂತಾ ಆ ಕ್ರೀಮ್, ಈ ಕ್ರೀಮ್  ಹಚ್ಚಿಕೊಳ್ಳುತ್ತಿರುತ್ತಾರೆ.  ಆದರೆ ಈ ನಟಿಗೆ ಅವಳು ಹೆಚ್ಚು ಸುಂದರವಾಗಿರುವುದೇ ದೊಡ್ಡ ಅಪರಾಧವಾಗಿದೆ.

ಹೌದು, ಕಾಂಬೋಡಿಯನ್ ನಟಿ ಡೆನಿ ನಾನ್(26) ಎಂಬಾಕೆಗೆ ಅಗತ್ಯಕ್ಕಿಂತ ಹೆಚ್ಚು ಸುಂದರವಾಗಿದ್ದಾಳೆ ಎಂಬ ಕಾರಣಕ್ಕೆ ಅಲ್ಲಿನ ಸರ್ಕಾರ 1 ವರ್ಷದ ನಿಷೇಧ ಹೇರುವುದರ ಮೂಲಕ ಆ ನಟಿಗೆ ಶಿಕ್ಷೆ ವಿಧಿಸಿದೆ. ಈ ವಿಷಯದ ಬಗ್ಗೆ ಕಾಂಬೋಡಿಯನ್ ಸಂಸ್ಕೃತಿ ಮತ್ತು ಕಲೆ ಸಚಿವಾಲಯ ತಿಳಿಸಿದೆ. ಡೆನ್ನಿನಾನ್ ನಟಿಯ ಫೋಟೋಗಳು ದೇಶದ ನೀತಿ ಸಂಹಿತೆಯನ್ನು ಉಲ್ಲಂಘಿಸುತ್ತವೆಯಂತೆ ಅಷ್ಟೆ ಅಲ್ಲದೆ ಡೆನ್ನಿ ನಾನ್ ಫೇಸ್ಬುಕ್ ಪೇಜ್ ಹೊಂದಿದ್ದು, ಅದರಲ್ಲಿ 3 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್ ಇದ್ದಾರೆ. ನಿಷೇಧಕ್ಕೊಳಗಾಗುವಂತಹ ಯಾವುದೇ ಕೆಲಸವನ್ನು ನಾನು  ಮಾಡಿಲ್ಲವೆಂದು ಡೆನ್ನಿ ನಾನ್ ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos