ವೀಳ್ಯದೆಲೆಯ ಆರೋಗ್ಯ ಲಕ್ಷಣಗಳು!

ವೀಳ್ಯದೆಲೆಯ ಆರೋಗ್ಯ ಲಕ್ಷಣಗಳು!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಕಷ್ಟವಾಗಿದೆ. ನಾವು ದಿನನಿತ್ಯ ಬಳಸುವ ಪದಾರ್ಥಗಳಲ್ಲಿ ನಮ್ಮ ಆರೋಗ್ಯ ಅಡಗಿದೆ. ಭಾರತದಲ್ಲಿ ಅನೇಕರಿಗೆ ವೀಳ್ಯದೆಲೆ ತಿನ್ನುವ ಅಭ್ಯಾಸವಿದೆ. ಏಕೆಂದರೆ ಭಾರತದಲ್ಲಿ ವೀಳ್ಯದೆಲೆ ತಿನ್ನುವುದು ಶತಮಾನಗಳ ಹಿಂದಿನ ಸಂಪ್ರದಾಯವಾಗಿದೆ. ದೇಶದಾದ್ಯಂತ ಹೆಚ್ಚಿನ ಸಂಖ್ಯೆಯ ಜನರು ವೀಳ್ಯದೆಲೆ ತಿನ್ನಲು ಇಷ್ಟಪಡುತ್ತಾರೆ. ಇದಲ್ಲದೇ ಓದುವ ಮಕ್ಕಳಿಗೆ ವೀಳ್ಯದೆಲೆಯ ರಸವನ್ನು ನೀಡುವುದರಿಂದ ನೆನಪಿನ ಶಕ್ತಿ ಹೆಚ್ಚುತ್ತದೆ. ಹೊಟ್ಟೆ ಹುಣ್ಣು, ಹುಣ್ಣು, ಬಾಯಿ ಹುಣ್ಣು ಸಮಸ್ಯೆ ದೂರವಾಗುತ್ತದೆ. ಒಂದು ವೀಳ್ಯದೆಲೆಗೆ ಐದಾರು ತುಳಸಿ ಎಲೆಗಳನ್ನು ಹಾಕಿ ಸ್ವಲ್ಪ ರಸ ಹಿಂಡಿ ಮಕ್ಕಳಿಗೆ ನೀಡಿದರೆ ನೆಗಡಿ, ಕೆಮ್ಮು ಗುಣವಾಗುತ್ತದೆ.

ಜೀರ್ಣಕ್ರಿಯೆ: ಜೀರ್ಣಾಂಗ ವ್ಯವಸ್ಥೆಯನ್ನು ಆರೋಗ್ಯವಾಗಿಡಲು ವೀಳ್ಯದೆಲೆಗಳನ್ನು ಸೇವಿಸಬಹುದು. ವೀಳ್ಯದೆಲೆಯ ನಿಯಮಿತ ಸೇವನೆಯು ಮಲಬದ್ಧತೆ ಮತ್ತು ಆಮ್ಲೀಯತೆಯಂತಹ ಸಮಸ್ಯೆಗಳಿಂದ ಪರಿಹಾರವನ್ನು ನೀಡುತ್ತದೆ.

ಒಸಡುಗಳು:  ವೀಳ್ಯದೆಲೆಯನ್ನು ಸೇವಿಸುವುದು ವಸಡುಗಳಿಗೆ ಪ್ರಯೋಜನಕಾರಿ. ವೀಳ್ಯದೆಲೆಗಳನ್ನು ನಿಯಮಿತವಾಗಿ ಜಗಿಯುವುದರಿಂದ ಒಸಡುಗಳ ಉರಿಯೂತದ ಸಮಸ್ಯೆಗಳನ್ನು ತೊಡೆದುಹಾಕಲು ಸಹಾಯ ಮಾಡುತ್ತದೆ.

ದೇಹದ ತೂಕ: ಕಾಳುಮೆಣಸಿನಲ್ಲಿರುವ ಪೆಪ್ಪರಿನ್ ಜೀರ್ಣಕ್ರಿಯೆಗೂ ಸಹಾಯ ಮಾಡುತ್ತದೆ. ಆದ್ದರಿಂದ, ವೀಳ್ಯದೆಲೆ ಕಾಳುಮೆಣಸು ಒಟ್ಟಿಗೆ ಸೇರಿ ಗ್ಯಾಸ್ ತೊಂದರೆಗಳು, ಅಜೀರ್ಣ, ಅತಿಸಾರ, ಮಲಬದ್ಧತೆ, ಆಮ್ಲೀಯತೆ,  ಮುಂತಾದ ಸಮಸ್ಯೆಗಳನ್ನು ನಿವಾರಿಸುತ್ತದೆ. ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಮಹಿಳೆಯರಲ್ಲಿ ಹೊಟ್ಟೆ ಮತ್ತು ಸೊಂಟದ ಪ್ರದೇಶದಲ್ಲಿ ಸಂಗ್ರಹವಾದ ಹೆಚ್ಚುವರಿ ಕೊಬ್ಬು ಕರಗಲು ಪ್ರಾರಂಭಿಸುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos