ಅಂಗವೈಕಲ್ಯವನ್ನೂ ಮೀರಿ ‘ಶ್ರೇಷ್ಠ ಆಟಗಾರ’ನಾದ ಬಾಲಕ!

ಅಂಗವೈಕಲ್ಯವನ್ನೂ ಮೀರಿ ‘ಶ್ರೇಷ್ಠ ಆಟಗಾರ’ನಾದ ಬಾಲಕ!

ಬೆಂಗಳೂರು, ಏ. 13, ನ್ಯೂಸ್ ಎಕ್ಸ್ ಪ್ರೆಸ್:  ಒಂದು ಕಾಲೋ ಕೈಯೋ ಇಲ್ಲ ಎಂದಾಕ್ಷಣ ಧೃತಿಗೆಟ್ಟು ಕೂರುವವರೇ ಬಹಳ. ಅಂಗವೈಕಲ್ಯವನ್ನೂ ಮೀರಿ ಸಾಧಿಸುವವರು ವಿರಳ. ಅಂಥ ಸಾಧಕರಲ್ಲೊಬ್ಬ ಮ್ಯಾನ್ಮಾರ್ ನ ಈ ಬಾಲಕ. ಹದಿನಾರು ವರ್ಷದ ಈ ಬಾಲಕನಿಗೆ ಒಂದು ಕಾಲೇ ಇಲ್ಲ. ಕಂಕುಳಕ್ಕೆ ಒಂದು ಆಧಾರ ಸಿಕ್ಕಿಸಿಕೊಂಡು ಒಂದು ಕಾಲಿನಲ್ಲೇ ಫುಟ್ಬಾಲ್ ಆಡುವ ಈತ ಅಂಗವಿಕಲರಷ್ಟೇ ಅಲ್ಲ, ಎಲ್ಲ ಸರಿ ಇರುವವರಿಗೂ ಮಾದರಿ ಎಂದರೆ ತಪ್ಪೇನಲ್ಲ. ಮ್ಯಾನ್ಮಾರ್ ನ ಕಾಂಗ್ ಖಾಂಟ್ ಲಿನ್ ಎಂಬ ಈತನಿಗೆ ಬಾಲ್ಯದಿಂದಲೂ ಫುಟ್ಬಾಲ್ ಎಂದರೆ ವಿಪರೀತ ಆಸಕ್ತಿ. ಹೀಗೆ ಫುಟ್ಬಾಲ್ ಆಡಿಕೊಂಡು ಬಂದಿರುವ ಈತ ಇತ್ತೀಚೆಗೆ ಮ್ಯಾಂಚೆಸ್ಟರ್ ಯುನೈಟೆಡ್‍ನ ಫುಟ್ಬಾಲ್ ಮ್ಯಾಚ್‍ನಲ್ಲಿ ಪಾಲ್ಗೊಂಡಿದ್ದಲ್ಲದೆ, ಆ ಪಂದ್ಯಾವಳಿಯ ಶ್ರೇಷ್ಠ ಆಟಗಾರ ಎಂಬ ಖ್ಯಾತಿಗೂ ಪಾತ್ರರಾಗಿದ್ದಾರೆ. ಆಟ ಆಡಲು ಹೋದಾಗೆಲ್ಲ ನನಗೆ ಒಂದು ಕಾಲಿಲ್ಲ ಎಂಬುದೇ ಮರೆತುಹೋಗುತ್ತದೆ, ಮಾಮೂಲಿ ಮನುಷ್ಯನಂತೆ ಆಡುತ್ತೇನೆ ಎನ್ನುತ್ತಾನೆ ಈ ಪೋರ.

ಫ್ರೆಶ್ ನ್ಯೂಸ್

Latest Posts

Featured Videos