ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ : ಲೈನ್ ಮನ್ ಸಾವು

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ : ಲೈನ್ ಮನ್ ಸಾವು

ಬೆಂಗಳೂರು , ಜು.15 : ಬೆಂಸ್ಕಾಂ ಅಭಿಯಂತರರು ನಿರ್ಲಕ್ಷದಿಂದ ವಿದ್ಯುತ್ ತಂತಿ ದುರಸ್ಥಿ ಕಾರ್ಯದಲ್ಲಿ ತೊಡಗಿದ್ದ ವೇಳೆ ವಿದ್ಯುತ್ ಪ್ರವಹಿಸಿ ಬೆಸ್ಕಾಂ ಲೈನ್ ಮನ್ ಮೃತಪಟ್ಟ ಘಟನೆ ಥಣಿಸಂದ್ರದಲ್ಲಿ ನಡೆದಿದೆ. ಬಾಣಸವಾಡಿ ನಿವಾಸಿ ಮುರಳಿ(42) ಮೃತ ಸಿಬ್ಬಂದಿ. ಬೆಂಸ್ಕಾಂ ಸಹಾಯಕ ನಿರ್ವಾಹಕ ಎಂಜಿನಿಯರ್ ಮುನುರಾಜು , ಕಿರಿಯ ಎಂಜಿನಿಯರ್ ಚಂದ್ರಶೇಖರ್ ವಿರುದ್ಧ ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಎಫ್ ಐಆರ್ ದಾಖಲಾಗಿದೆ. ಬೆಸ್ಕಾಂ ಅಧಿಕಾರಿಗಳ ಬೇಜವಾಬ್ದಾರಿ ಖಂಡಿಸಿ ಅಂಬೇಡ್ಕರ್ ಆಸ್ಪತ್ರೆ ಬಳಿ ಮುರಳಿ ಕುಟುಂಬದವರು ಪ್ರತಿಭಟನೆ ನಡೆಸಿದರು. ತಪ್ಪಿತಸ್ಥ ಎಂಜಿನಿಯರ್ ಗಳನ್ನು ಕೂಡಲಢ ಬಂಧಿಸಿ, ಕಾನೂನು ಕೈಗೊಳ್ಳಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. 15 ವರ್ಷಗಳಿಂದ ಮುರಳಿ ಬೆಸ್ಕಾಂ ಲೈಲ್ ಮನ್ ಆಗಿ ಕಾರ್ಯನಿರ್ವಹಿಸುತ್ತಿದ್ದು, ಪತ್ನಿ ಮತ್ತು ಮಗನ ಜತೆ ಬಾಣಸವಾಡಿಯಲ್ಲಿ ನೆಲೆಸಿದ್ದರು.ರಜೆ ಹಿನ್ನಲೆ ಮನೆಯಲ್ಲಿದ್ದ ಲೈಲ್ ಮನ್ ಮುರುಳಿ ಗೆ ಎಂಜಿನಿಯರ್ ಚಂದ್ರಶೇಖರ, ಥಣಿಸಮದ್ರ ಬಳಿ ವಿದ್ಯುತ್ ಪೂರೈಕೆಯಲ್ಲಿ ಸಮಸ್ಯೆ ಹಿನ್ನಲೆ ದೂರು ಬಂದಿದೆ. ಸ್ಥಳಕ್ಕೆ ತೆರಳಿ ದುರಸ್ಥಿ ಮಾಡುವಂತೆ ಸೂಚಿಸಿದ್ದರು. ವಿದ್ಯುತ್ ಸಂಪರ್ಕ ಸ್ಥಗಿತಗೊಳಿಸಿ ವಿದ್ಯತ್ ವೈರ್ ದುರಸ್ತಿ ಮಾಡಲು ಮುರುಳಿ ವಿದ್ಯುತ್ ಕಂಬ ಏರಿದ್ದರು. ವಿದ್ಯುತ್ ತಂತಿ ಸರಿಪಡಿಸುವ ಕೆಲಸ ನಡೆಯುತ್ತಿದ್ದಂತೆ ವಿದ್ಯುತ್ ಪ್ರವಹಿಸಿದ ಪರಿಣಾಮ ಮುರಳಿ ಕಂಬದಲ್ಲೇ ಸಾವಿಗೀಡಾಗಿದ್ದಾರೆ. ಭಯಗೊಂಡ ಚಂದ್ರಶೇಖರ ತಕ್ಷಣ ಸ್ಥಳದಿಂದ ಪರಾರಿಯಾಗಿದ್ದಾರೆ. ದುರಂತಕ್ಕೆ ಬೆಸ್ಕಾಂ ಅಧಿಕಾರಿಗಳೇ ಕಾರಣ. ಸಹಾಯಕ ಕಾರ್ಯನಿರ್ವಹಕ ಎಂಜಿನಿಯರ ಮುನಿರಾಜು ಅವರಿಗೆ ಮುರಳಿ ಕಂಡರೇ ಆಗುತ್ತಿರಲಿಲ್ಲ. ಉದ್ದೇಶ ಪೂರ್ಕವಾಗಿ ಸ್ವಿಚ್ ಆನ್ ಮಾಡಿದ್ದರಿಂದ ವಿದ್ಯುತ್ ಪ್ರವಹಿಸಿ ಮುರಳಿ ಮೃತ ಪಟ್ಟಿದ್ದಾರೆ ಎಂದು ವೃತನ ಕುಟುಂಬಸ್ಥರು ದೂರುದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos