ಬೆಸ್ಕಾಂ ಡೆಟಾ ಸುನಾಮಿ

ಬೆಸ್ಕಾಂ ಡೆಟಾ ಸುನಾಮಿ

ಬೆಂಗಳೂರು, ನ. 20: ಟೆಲಿಕಾಂ ಕ್ಷೇತ್ರದಲ್ಲಿ ಬೆಲೆ, ಡೇಟಾ ಯುದ್ಧ ಮುಂದುವರೆದಿದೆ. ಜಿಯೋ ಸೇರಿದಂತೆ ಅನೇಕ ಕಂಪನಿಗಳು ಸಾಕಷ್ಟು ಅಗ್ಗದ ಯೋಜನೆಗಳನ್ನು ಗ್ರಾಹಕರಿಗೆ ಪರಿಚಯಿಸಿವೆ. ಖಾಸಗಿ ಕಂಪನಿಗಳಿಗೆ ಪೈಪೋಟಿಗಿಳಿದಿರುವ ಬಿಎಸ್‌ಎನ್‌ಎಲ್ ಅಗ್ಗದ ಡೇಟಾ ವೋಚರ್ ಪ್ಲಾನ್ ಶುರು ಮಾಡುವ ಘೋಷಣೆ ಮಾಡಿದೆ.  ಬಿಎಸ್‌ಎಸ್‌ಎಲ್ ಅನೇಕ ಯೋಜನೆಗಳನ್ನು ನವೀಕರಿಸಿದೆ. ಜನರಿಗೆ ಬಿಎಸ್‌ಎನ್‌ಎಲ್ ಕಾಂಬೋ ಪ್ಯಾಕ್ ಇಷ್ಟವಾಗಿದೆ. ಬಿಎಸ್‌ಎನ್‌ಎಲ್ ಇದುವರೆಗೆ ಭಾರತೀಯ ಟೆಲಿಕಾಂ ಮಾರುಕಟ್ಟೆಯಲ್ಲಿ ಅಗ್ಗದ ಏಳು ರೂಪಾಯಿ ಡೇಟಾ ಪ್ಯಾಕ್ ಬಿಡುಗಡೆ ಮಾಡಿದೆ. ಕಂಪನಿಯು ಈ ಡೇಟಾ ಪ್ಯಾಕ್‌ಗೆ ಮಿನಿ 7 ಎಂದು ಹೆಸರಿಟ್ಟಿದೆ.

7 ರೂಪಾಯಿ ಡೇಟಾ ವೋಚರ್ ನಲ್ಲಿ ಗ್ರಾಹಕರಿಗೆ ಒಂದು ಜಿಬಿ ಡೇಟಾ ಸಿಗಲಿದೆ. ಪ್ಯಾಕ್ ಒಂದು ದಿನಗಳ ಸಿಂಧುತ್ವ ಹೊಂದಿರಲಿದೆ. ಇದೇ ವೇಳೆ ಕಂಪನಿ ಮಿನಿ 16 ಹೆಸರಿನ ಮತ್ತೊಂದು ಪ್ಯಾಕ್ ಪರಿಚಯಿಸಿದೆ. ಇದರಲ್ಲಿ ಬಳಕೆದಾರರು ಎರಡು ಜಿಬಿ ಡೇಟಾವನ್ನು ಪಡೆಯಲಿದ್ದಾರೆ. ಮಾಹಿತಿ ಪ್ರಕಾರ, ಬಿಎಸ್‌ಎನ್‌ಎಲ್ ಡೇಟಾ ಸುನಾಮಿ ಹೆಸರಿನ ಯೋಜನೆಯನ್ನು ಪ್ರಾರಂಭಿಸಿದೆ. ಇದರಲ್ಲಿ ಬಳಕೆದಾರರು ಎರಡು ಜಿಬಿ ಡೇಟಾವನ್ನು 98 ರೂಪಾಯಿಗೆ ಪಡೆಯಲಿದ್ದಾರೆ. ಈ ಯೋಜನೆ 24 ದಿನಗಳ ಸಿಂಧುತ್ವ ಹೊಂದಿರಲಿದೆ.

 

ಫ್ರೆಶ್ ನ್ಯೂಸ್

Latest Posts

Featured Videos