ಬೆಸ್ಕಾಂ ಸಿಬ್ಬಂದಿಯಿಂದ ಮರಗಳಿಗೆ ಕೊಡಲಿ ಏಟು!

ಬೆಸ್ಕಾಂ ಸಿಬ್ಬಂದಿಯಿಂದ ಮರಗಳಿಗೆ ಕೊಡಲಿ ಏಟು!

ಬೆಂಗಳೂರು,ಜು.4: ವಿದ್ಯುತ್ ಲೈನ್ ಗೆ ಮರಗಳ ಕೊಂಬೆಗಳು ತಾಕುತ್ತಿವೆ ಅನ್ನೂ ನೆಪವೊಡ್ಡಿ ಬುಡದ ವರೆಗೂ ಬೆಸ್ಕಾಂ ಸಿಬ್ಬಂದಿ ಮರಗಳನ್ನ ಕಡಿದಿರೂ ಘಟನೆ ಬೆಂಗಳೂರು ಗ್ರಾಮಾಂತರ ಜಿಲ್ಲೆ ದೇವನಹಳ್ಳಿ ಪಟ್ಟಣದ ಶಾಂತಿನಗರದಲ್ಲಿ ಇಂದು ನಡೆದಿದೆ. ಶಾಂತಿನಗರದ ಉದ್ಯಾನವನದಲ್ಲಿದ್ದ ಮರಗಳು ಬೆಸ್ಕಾಂ ವಿದ್ಯುತ್ ತಂತಿ ಗೆ ತಾಕದಿದ್ರು, ಮರಗಳಿಗೆ ಬೆಸ್ಕಾಂ ಸಿಬ್ಬಂದಿ ಕೊಡಲಿ ಪೆಟ್ಟು ನೀಡಿ ಹತ್ತಾರು ಮರಗಳನ್ನ ನಾಶ ಮಾಡಿದ್ದಾರೆ. ಇನ್ನೂ ಮರಗಳು ಲೈನ್ ಗೆ ತಾಕಿದ್ರೆ ಮರದ ಕೊಂಬೆಗಳನ್ನ ಕಡಿಯುವುದನ್ನ ಬಿಟ್ಟು ಮರವನ್ನೆ ಕಡಿದಿರುವುದರ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದು, ಮರಗಳನ್ನ ಬುಡದ ವರೆಗೂ ಕಡಿದು ಹಾಕಿರೂ ಬೆಸ್ಕಾಂ ಸಿಬ್ಬಂದಿ ವಿರುದ್ದ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಬೇಸ್ಕಾಂ ಎಇಇ ಕ್ಷಡಾಕ್ಷರಿಯವರನ್ನ ಕೇಳಿದ್ರೆ ಉಡಾಪೆ ಉತ್ತರ ನೀಡ್ತಾರೇ. ಜತೆಗೆ ಮರಗಳನ್ನ ಕಡಿಯೋದು ತಪ್ಪಲ್ವ ಅಂದ್ರೆ ನಮ್ಮ ಸಿಬ್ಬಂದಿ ಸತೀಶ್‌ರವರನ್ನ ಕೇಳಿ ಅಂತಾರೇ. ಮರಗಳನ್ನ ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಅಧಿಕಾರಿಗಳು ಪಾತ್ರ ಕೂಡ ದೊಡ್ಡದೀರಬೇಕು. ಆದ್ರೆ ಕೊಂಬೆಗಳನ್ನ ಕಡಿಯೋದು ಬಿಟ್ಟು ಮರವನ್ನೆ ಮಟಾಷ್ ಮಾಡಿದ ಬೆಸ್ಕಾಂ ವಿರುದ್ದ ಪರಿಸರ ಪ್ರೇಮಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos