ಬೆನ್ ಸ್ಟೋಕ್ಸ್ ಗೆ ‘ಸರ್’ ಪದವಿ

ಬೆನ್ ಸ್ಟೋಕ್ಸ್  ಗೆ ‘ಸರ್’ ಪದವಿ

ಲಂಡನ್, ಜು.17 : ಇಂಗ್ಲೆಂಡ್ನ ವಿಶ್ವಕಪ್ ಹೀರೋ ಬೆನ್ ಸ್ಟೋಕ್ಸ್ಗೆ ‘ಸರ್’ ಬೆನ್ ಸ್ಟೋಕ್ಸ್ ಎಂದು ಕರೆಸಿಕೊಳ್ಳುವ ನಿರೀಕ್ಷೆ. ಏಕದಿನ ವಿಶ್ವಕಪ್ ಫೈನಲ್ನಲ್ಲಿ ಸ್ಟೋಕ್ಸ್ ಅಜೇಯ 84 ರನ್ ಗಳಿಸಿ, ಇಂಗ್ಲೆಂಡ್ ಪಂದ್ಯವನ್ನು ಟೈ ಮಾಡಿಕೊಳ್ಳುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಳಿಕ ಸೂಪರ್ ಓವರ್ನಲ್ಲೂ ಅವರು 8 ರನ್ ಗಳಿಸಿದರು.ಬ್ರಿಟನ್ನ ಅತ್ಯುನ್ನತ ನೈಟ್ಹುಡ್ ಗೌರವ ಮುಂದಿನ ದಿನಗಳಲ್ಲಿ ಅವರು ‘ಸರ್’ ಬೆನ್ ಸ್ಟೋಕ್ಸ್ ಎಂದು ಕರೆಸಿಕೊಳ್ಳುವ ನಿರೀಕ್ಷೆ ಇದೆ. ಸ್ಟೋಕ್ಸ್ ಪ್ರದರ್ಶನ ಬ್ರಿಟನ್ನ ಪ್ರಧಾನಿ ಅಭ್ಯರ್ಥಿಗಳಾದ ಬೋರಿಸ್ ಜಾನ್ಸನ್ ಹಾಗೂ ಜೆರೆಮಿ ಹಂಟ್ ಇಬ್ಬರ ಮನ ಸೆಳೆದಿದೆ. ಈ ತಿಂಗಳ ಅಂತ್ಯಕ್ಕೆ ಹಾಲಿ ಪ್ರಧಾನಿ ಥೆರೇಸಾ ಮೇ ಅವಧಿ ಮುಕ್ತಾಯಗೊಳ್ಳಲಿದ್ದು, ಬೋರಿಸ್ ಇಲ್ಲವೇ ಜೆರೆಮಿ ಇಬ್ಬರಲ್ಲಿ ಒಬ್ಬರು ನೂತನ ಪ್ರಧಾನಿಯಾಗಲಿದ್ದಾರೆ. ಇಬ್ಬರೂ ಸ್ಟೋಕ್ಸ್ಗೆ ನೈಟ್ಹುಡ್ ಗೌರವ ನೀಡುವ ಭರವಸೆ ನೀಡಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos