ಬೆಂಗಳೂರು ಪೂರ್ವ ತಾಲ್ಲುಕು ಒಕ್ಕಲಿಗರ ಸ್ನೇಹ ಕೂಟ

ಬೆಂಗಳೂರು ಪೂರ್ವ ತಾಲ್ಲುಕು ಒಕ್ಕಲಿಗರ ಸ್ನೇಹ ಕೂಟ

ಕೆ.ಆರ್.ಪುರ, ಸೆ. 16: ಮಕ್ಕಳಿಗೆ ವಿದ್ಯಾಭ್ಯಾಸದ ಜೊತೆಗೆ ಉತ್ತಮ ಸಂಸ್ಕಾರ ಹಾಗು ಆದ್ಯಾತ್ಮ  ಚಿಂತನೆ ಮಾಡುವ ಸಂಸ್ಕಾರವಂತರನ್ನಾಗಿ ಮಾಡುವುದು ಪೋಷಕರ ಆದ್ಯ ಕರ್ತವ್ಯವಾಗಿರುತ್ತದೆ ಎಂದು ವಿಶ್ವ ಒಕ್ಕಲಿಗ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ  ಶ್ರೀಕುಮಾರ ಚಂದ್ರಶೇಖರನಾಥ್ ಸ್ವಾಮೀಜಿ ಹೇಳಿದರು.

ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಹಮ್ಮಿಕೊಂಡಿದ್ದ ಬೆಂಗಳೂರು ಪೂರ್ವ ತಾಲ್ಲೂಕು ಜೈ ಭುವನೇಶ್ವರಿ ಒಕ್ಕಲಿಗರ ಸಂಘ.

ಕೃಷ್ಣರಾಜಪುರ ವೃತ್ತದಿಂದ ಆಯೋಜಿಸಲಾಗಿದ್ದ ಒಕ್ಕಲಿಗರ ಸ್ನೇಹಕೂಟ- 2019 ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಚಿಕ್ಕ ವಯಸ್ಸಿನ ಮಕ್ಕಳು ಅಗಾಧವಾದನವನ್ನು ಹೊಂದಿರುತ್ತಾರೆ. ಮಕ್ಕಳಿಗೆ ಓದುವ ವಾತಾವರಣವನ್ನು ಕಲ್ಪಿಸಿ ಓದಲು ಪ್ರೇರೇಪಿಸಬೇಕು. ತಮ್ಮ ಮಕ್ಕಳನ್ನು ಹತೋಟಿಯಲ್ಲಿಟ್ಟುಕೊಂಡು ಆಧ್ಯಾತ್ಮ ಮತ್ತು ಸಂಸ್ಕಾರ ಬಿತ್ತಬೇಕು. ಮಕ್ಕಳು ಹಿರಿಯರು, ತಮ್ಮ ಪೋಷಕರಿಗೆ ಗೌರವ ನೀಡುವ ಸಂಸ್ಕಾರ ಗುಣಗಳನ್ನು ಬೆಳಸಿಕೊಳ್ಳಬೇಕೆಂದು ಸಲಹೆ ನೀಡಿದರು. ಕೆ.ಆರ್.ಪುರದಲ್ಲಿ ಒಕ್ಕಲಿಗರ ಸ್ನೇಹಕೂಟ ಏರ್ಪಡಿಸಿರುವುದು ಸಂತಸದ ವಿಷಯ, ಒಕ್ಕಲಿಗ ಸಮುದಾಯದವರನ್ನು ಒಂದಡೆ ಸೇರಿಸಿರುವ ಕಾರ್ಯ ಶ್ಲಾಘನೀಯ.

ದ್ವೇಷ ಅಸೂಯೆ, ಅಹಂಕಾರ ಬದಿಗಿಟ್ಟು ಹಿರಿಯ ಕಿರಿಯ ಬೇಧಭಾವಎನ್ನದೆ ನಾವೆಲ್ಲರೂ ಒಂದೆ ಎಂಬ ಭಾವನೆ ಮೂಡಿದಾಗ ಸಮಾಜ ಪ್ರಗತಿಹೊಂದಿ ಒಬ್ಬರಿಗೊಬ್ಬರು ಸಹಾಯ ಮಾಡುವ ಮನೋಭಾವ ಬೆಳಿಸಿಕೊಳ್ಳಬೇಕು ಎಂದರು. ಇಂದಿನ ಆದುನಿಕ ಯುಗದಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಗೆ ಮಾರುಹೋಗಿದ್ದು,  ಹಿರಿಯರಿಂದ ಹಿಂದಿನಿಂದಲೂ ಅಚರಿಸಿಕೊಂಡ ಬಂದ ಪರಂಪರೆಯ ಸಂಸ್ಕೃತಿ ನಶಿಸಿಹೋಗುತ್ತಿದೆ. ಕಾರ್ಯಕ್ರಮಕ್ಕೂ ಮುನ್ನ ಶ್ರೀಗಳನ್ನು ಶ್ರೀ ಕುಮಾರ ಚಂದ್ರಶೇಖರನಾಥ್ ಸ್ವಾಮಿಗಳ ಕೃಷ್ಣರಾಜಪುರ ವೃತ್ತದ ನಾಡಪ್ರಭು ಕೆಂಪೇಗೌಡ ಪುತ್ಥಳಿ ಬಳಿ ಕಳಸ ಹೊತ್ತ ನೂರಾರು ಮಹಿಳೆಯರಿಂದ ಪೂರ್ಣಕುಂಭ ಸ್ವಾಗತ, ಶ್ರೀಗಳನ್ನು ಬೆಳ್ಳಿ ರಥದಲ್ಲಿ ಕೃಷ್ಣರಾಜಪುರ ವೃತ್ತದಿಂದ ರಾಜೀವ ಕ್ರೀಡಾಂಗಣಕ್ಕೆ ಕರೆದೊಯ್ಯಲಾಯಿತು. ಮೆರವಣಿಗೆಯಲ್ಲಿ ಮಂಗಳವಾಧ್ಯ, ಕಂಸಾಳೆ ಡೊಳ್ಳು ಕುಣಿತ, ಜನಪದ ಕಲಾತಂಡಗಳ ಪ್ರದರ್ಶನ ನೆರೆದಿದ್ದ ಜನರನ್ನು ಮನಸಾರೆ ಗೊಳಿಸಿತ್ತು.ಈ ಕಾರ್ಯಕ್ರಮದಲ್ಲಿ ವಿವಿದ ಸ್ವರ್ದೆಗಳಲ್ಲಿ ವಿಜೆತರಾದವರಿಗೆ ಬಹುಮಾನ ವಿತರಿಸಲಾಯಿತು.

 

 

 

 

 

ಫ್ರೆಶ್ ನ್ಯೂಸ್

Latest Posts

Featured Videos