ಬೆಂಗಳೂರು ಬಂದ್: ವಾಹನ ಸವಾರರು ಹೈರಾಣು, ಟ್ರಾಫಿಕ್ ಹೆದರಿ ಮೆಟ್ರೋ ಪ್ರಯಾಣ

ಬೆಂಗಳೂರು ಬಂದ್: ವಾಹನ ಸವಾರರು ಹೈರಾಣು, ಟ್ರಾಫಿಕ್ ಹೆದರಿ ಮೆಟ್ರೋ ಪ್ರಯಾಣ

ಬೆಂಗಳೂರು: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ನೀಡಿದ ಐದು ಗ್ಯಾರಂಟಿಗಳಲ್ಲಿ ಈಗಾಗಲೇ 4 ಗ್ಯಾರಂಟಿಗಳನ್ನು ಜಾರಿಗೆ ಮಾಡಲಾಗಿದೆ. ಅದರಲ್ಲಿ ಒಂದಾದ ಶಕ್ತಿ ಯೋಜನೆ ಅಡಿಯಲ್ಲಿ ಎಲ್ಲಾ ಮಹಿಳೆಯರಿಗೂ ಉಚಿತ ಪ್ರಯಾಣ ಎಂದು ಘೋಷಣೆ ಮಾಡಲಾಗಿತ್ತು. ಇದರಿಂದ ಖಾಸಗಿ ವಾಹನಗಳು ಹಾಗೂ ಆಟೋ, ಟ್ಯಾಕ್ಸಿ ಇವೆಲ್ಲ ವಾಹನಗಳಿಗೆ ತೊಂದರೆಯಾಗುತ್ತಿದೆ. ಏಕೆಂದರೆ ಉಚಿತ ಪ್ರಯಾಣದಲ್ಲಿ ಎಲ್ಲರೂ ಸರ್ಕಾರಿ ಬಸ್ಸ್ ಗಳ ಕಡೆ ಮುಖ ಮಾಡುತ್ತಿದ್ದಾರೆ. ಇದರಿಂದ ಖಾಸಗಿ ವಾಹನಗಳ ಬಳಕೆ ಕಡಿಮೆಯಾಗಿದೆ.
ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಂದು ಖಾಸಗಿ ಸಾರಿಗೆ ಒಕ್ಕೂಟ ಬೆಂಗಳೂರು ಬಂದ್ ಗೆ ಕರೆ ನೀಡಿರುವ ಹಿನ್ನೆಲೆ ಆಟೋ, ಟ್ಯಾಕ್ಸಿ, ಕ್ಯಾಬ್ ಸೇರಿದಂತೆ ಎಲ್ಲ ಖಾಸಗಿ ವಾಹನಗಳು ರಸ್ತೆಗಿಳಿಯದೆ ಪ್ರತಿಭಟನೆ ಸಾಥ್ ಕೊಟ್ಟಿರುವುದರಿಂದ ಎಲ್ಲಿ ನೋಡಿದರೂ ಟ್ರಾಫಿಕ್ ಜಾಮ್‌ ಜಾಮ್ ಜಾಮ್!
ಯಶವಂತಪುರ ಫ್ಲೈ ಓವರ್ ಮೇಲೆ ಫುಲ್ ಟ್ರಾಫಿಕ್ ಜಾಮ್ ತಾಸಿನಿಂದ ನಿಂತಲ್ಲೇ ನಿಂತಿರೋ ವಾಹನಗಳು. ಮುಂದೆ ಸಾಗಲಾಗದೆ, ಹಿಂದಕ್ಕೂ ಚಲಿಸಲಾಗದೆ ಟ್ರಾಫಿಕ್ ಜಾಮ್ ಸಿಲುಕಿ ವಾಹನ ಸವಾರರ ಪರದಾಟ. ಯಶವಂತಪುರ, ಸರ್ಕಲ್ ಮಾರಮ್ಮ ಟೆಂಪಲ್, ಮಲ್ಲೇಶ್ವರಂ, ಸ್ಯಾಂಕಿಟ್ಯಾಂಕಿ, ಕಾವೇರಿ ಜಂಕ್ಷನ್ ಸೇರಿದಂತೆ ಬಹುತೇಕ ಎಲ್ಲ ಕಡೆ ಟ್ರಾಫಿಕ್ ಜಾಮ್.
ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಓಲಾ, ಊಬರ್ ಕ್ಯಾಬ್ ಸಂಘಟನೆ ಬಂದ್ ಗೆ ಬೆಂಬಲ ನೂರಾರು ಕ್ಯಾಬ್ ಗಳನ್ನ ನಿಲ್ಲಿಸಿ ಬಂದ್ ಗೆ ಬೆಂಬಲ.
ಖಾಸಗಿ ಸಾರಿಗೆ ಒಕ್ಕೂಟ ಬಂದ್ ವೇಳೆ ಸಾರ್ವಜನಿಕರಿಗೆ ಯಾವುದೇ ತೊಂದರೆ ಆಗದಂತೆ ಪೊಲೀಸರು ಮುಂಚಿತವಾಗಿ ತಯಾರಿ. ಮೆರವಣಿಯುದ್ದಕ್ಕೂ ಪೊಲೀಸರ ಸರ್ಪಗಾವಲು. ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಫ್ರೀಡಂ ಪಾರ್ಕ್ ವರೆಗೆ ಬೃಹತ್ ಪ್ರತಿಭಟನೆ ಹಿನ್ನೆಲೆ ಪಶ್ಚಿಮ ವಿಭಾಗದ ಡಿಸಿಪಿ ಎಸ್.ಗಿರೀಶ್ ನೇತೃತ್ವದಲ್ಲಿ ಭದ್ರತೆ. 684 ಪೊಲೀಸರ ನಿಯೋಜನೆ. 8 ಎಸಿಪಿ, 27 ಇನ್ಸ್ ಪೆಕ್ಟರ್ ಗಳು, 72 ಪಿಎಸ್ ಐ, 14 ಮಹಿಳಾ ಪಿಎಸ್ಐ ಸೇರಿದಂತೆ 684 ಸಿಬ್ಬಂದಿ ನಿಯೋಜನೆ ಮಾಡಲಾಗಿದೆ. ಸಂಗೊಳ್ಳಿ ರಾಯಣ್ಣ ಪ್ರತಿಮೆಯಿಂದ ಒಟ್ಟಿಗೆ ರಾಲಿ ಮಾಡಲು ಅವಕಾಶ ಇಲ್ಲ. ಇಲ್ಲಿಂದ ಫ್ರೀಡಂ ಪಾರ್ಕ್ ವರೆಗೆ ಪೊಲೀಸ್ ವಾಹನದಲ್ಲಿ ಕಳಿಸಲು ವ್ಯವಸ್ಥೆ. ಇಲ್ಲ ನಾವು ರ‍್ಯಾಲಿ ಮಾಡಬೇಕು ಅಂತಂದ್ರೆ 20 ಜನರಂತೆ ಒಂದು ತಂಡ ಮಾಡಿ ಕಳಿಸಲು ತಯಾರಿ. ಯಾವುದೇ ಕಾರಣಕ್ಕೂ ದೊಡ್ಡ ಮಟ್ಟದ ರ‍್ಯಾಲಿ ಮಾಡಲು ಅವಕಾಶ ಮಾಡಿಕೊಡಲ್ಲ ಎನ್ನುತ್ತಿರುವ ಪೋಲೀಸರು.

ಫ್ರೆಶ್ ನ್ಯೂಸ್

Latest Posts

Featured Videos