ಬೆಂಗಳೂರಲ್ಲಿ ಬಂಗಾರ, ಬೆಳ್ಳಿ ಏರಿಕೆ

ಬೆಂಗಳೂರಲ್ಲಿ ಬಂಗಾರ, ಬೆಳ್ಳಿ ಏರಿಕೆ

ಬೆಂಗಳೂರು, ಸೆ. 28: ಒಂದು ಕಡೆ ತೈಲ ಬೆಲೆ ಏರಿಕೆ ಕಾಣುತ್ತಿದೆ. ಇನ್ನೊಂದು ಕಡೆ ಅಮೂಲ್ಯ ಲೋಹ ಚಿನ್ನದ ಬೆಲೆಯೂ ಸಹ ಏರುಗತಿಯಲ್ಲಿ ಸಾಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಲೇ ಇದೆ. ಷೇರುಪೇಟೆಯಲ್ಲಿನ ಏರಿಳಿತಕ್ಕೆ ಅನುಗುಣವಾಗಿ ಚಿನ್ನದ ಬೆಲೆ ಹೆಚ್ಚು ಕಡಿಮೆ ಆಗುವುದು ಸಾಮಾನ್ಯ, ಇಂದಿನ ದರವನ್ನು ನೋಡುವುದಾದರೆ, 22 ಕ್ಯಾರೆಟ್ ಚಿನ್ನ ಶುಕ್ರವಾರಕ್ಕಿಂತ 20ರೂ ಹೆಚ್ಚಿದ್ದು ಒಂದು ಗ್ರಾಂ ಚಿನ್ನದ ಬೆಲೆ 3,550ರೂ ಇದೆ. ನಿನ್ನೆ ಈ ದರ 3,530ರೂ ಇತ್ತು. ಅಂದರೆ 10 ಗ್ರಾಂ ಚಿನ್ನಕ್ಕೆ 200 ರೂ ಏರಿಕೆಯಾಗಿ, 35,500ಕ್ಕೆ ತಲುಪಿದೆ. 24 ಕ್ಯಾರೆಟ್ ಚಿನ್ನ 10ಗ್ರಾಂಗೆ 38,700ರೂ ಇದೆ.

ಫ್ರೆಶ್ ನ್ಯೂಸ್

Latest Posts

Featured Videos