ಬಿಬಿಎಂಪಿ ಕಾಮಗಾರಿ: ಬೆಂಗಳೂರಿನ ಈ ರಸ್ತೆಗಳ ಮಾರ್ಗ ಬದಲಾವಣೆ!

ಬಿಬಿಎಂಪಿ ಕಾಮಗಾರಿ: ಬೆಂಗಳೂರಿನ ಈ ರಸ್ತೆಗಳ ಮಾರ್ಗ ಬದಲಾವಣೆ!

ಬೆಂಗಳೂರು, ಮಾ.13, ನ್ಯೂಸ್ ಎಕ್ಸ್ ಪ್ರೆಸ್: ನಗರದ ಹಲವಡೆ ಬಿಬಿಎಂಪಿ ವೈಟ್ ಟಾಪಿಂಗ್ ರಸ್ತೆ ಕಾಮಗಾರಿ ಮುಂದುವರಿದಿದೆ. ಇದೀಗ ಆರ್.ವಿ.ರಸ್ತೆ, ಲಾಲ್‌ಬಾಗ್ ನಿಂದ ಬನಶಂಕರಿ ಟಿಟಿಎಂಸಿ ವರೆಗಿನ ಕಾಮಗಾರಿ ಆರಂಭಗೊಂಡಿದೆ. ಹೀಗಾಗಿ ಕಾಮಗಾರಿ ನಡೆಯುವ ಹಿನ್ನಲೆಯಲ್ಲಿ ಮಾರ್ಗ ಬದಲಾವಣೆ ಮಾಡಲಾಗಿದೆ.

ಅರ್ ವಿ ರಸ್ತೆ, ಲಾಲ್ ಬಾಗ್, ಮಾರೇನಹಳ್ಳಿ ಜಂಕ್ಷನ್‌, ಬನಶಂಕರಿ ಟಿಟಿಎಂಸಿ ಮಾರ್ಗದಲ್ಲಿ ಬದಲಾವಣೆ ಮಾಡಲಾಗಿದೆ. ನಾಳೆಯಿಂದ(ಮಾ.14) ವೈಟ್ ಟಾಪಿಂಗ್ ಕಾಮಗಾರಿ ಆರಂಭವಾಗಲಿದೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವ ವಾಹನ ಸವಾರರ ಮಾಹಿತಿಗಾಗಿ ಬಿಬಿಎಂಪಿ ಪ್ರಕಟಣೆ ಹೊರಡಿಸಿದೆ.

ಸರಿ ಸುಮಾರು 1 ತಿಂಗಳಿಗೂ ಹೆಚ್ಚು ಕಾಲ ವೈಟ್ ಟಾಪಿಂಗ್ ನಡೆಯಲಿದೆ. ಕಾಮಗಾರಿಯಿಂದ ಈ ಮಾರ್ಗಗಳಲ್ಲಿ ಟ್ರಾಫಿಕ್ ಸಮಸ್ಯೆ ತಲೆದೋರಲಿದೆ. ಹೀಗಾಗಿ ವಾಹನ ಸವಾರರು ಮಾರ್ಗ ಬದಲಾಯಿಸಿ ಸಂಚರಿಸಲು ಬಿಬಿಎಂಪಿ ಸೂಚಿಸಿದೆ. ಇಷ್ಟೇ ಅಲ್ಲ ಅಡಚಣೆಗೆ ಸಹಕರಿಸಬೇಕಾಗಿ ಮನವಿ ಮಾಡಿದೆ.

ಫ್ರೆಶ್ ನ್ಯೂಸ್

Latest Posts

Featured Videos