ಏಲಕ್ಕಿಯ ಹಲವು ಪ್ರಯೋಜನಗಳು!

ಏಲಕ್ಕಿಯ ಹಲವು ಪ್ರಯೋಜನಗಳು!

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ತುಂಬಾ ಕಷ್ಟಕರವಾಗಿದೆ. ಆದರೆ ನಾವು ಸರಿಯಾದ ರೀತಿಯ ಹಣ್ಣುಗಳು ಹಾಗೂ ತರಕಾರಿಗಳನ್ನು ಸೇವನೆ ಮಾಡುವುದರಿಂದ ನಮ್ಮ ಆರೋಗ್ಯವನ್ನು ನಾವು ಕಾಪಾಡಿಕೊಳ್ಳಬಹುದು ಅದೇ ತರ ನಾವು ಏಲಕ್ಕಿ ತಿನ್ನುವುದರಿಂದ ನಮ್ಮ ಆರೋಗ್ಯದಲ್ಲಿ ಉತ್ತಮ ಕಾಣಬಹುದು.
ರಾತ್ರಿ ಮಲಗುವ ಮುನ್ನ ಒಂದು ಸಣ್ಣ ಏಲಕ್ಕಿಯನ್ನು ಕಚ್ಚಿ ಬಾಯಲ್ಲಿ ಇಟ್ಟುಕೊಂಡರೆ ಅದರಿಂದ ಸಾಕಷ್ಟು ಉಪಯೋಗವಾಗುತ್ತದೆ. ನೀವೇನಾದರೂ ತೂಕ ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ, ಪ್ರತಿದಿನ ಒಂದು ಏಲಕ್ಕಿಯನ್ನು ತಿನ್ನಬೇಕು.
ಏಲಕ್ಕಿಯ ಒಳಗೆ ಒಂದು ವಿಧವಾದ ಎಣ್ಣೆ ಇರುತ್ತದೆ. ಮಲಗುವಾಗ ಅದನ್ನು ಬಾಯಿಯಲ್ಲಿ ಇಟ್ಟಾಗ, ಎಣ್ಣೆಯು ದೇಹದ ಒಳಗೆ ಹೋಗುತ್ತದೆ. ಇದು ಹೊಟ್ಟೆಯ ಒಳಭಾಗವನ್ನು ಬಲಪಡಿಸುತ್ತದೆ. ಕಿಬ್ಬೊಟ್ಟೆಯಲ್ಲಿ ಸೇರಿರುವ ಆಮ್ಲವನ್ನು ಕ್ರಮೇಣ ತೆಗೆದುಹಾಕಲಾಗುತ್ತದೆ.
ಗೊರಕೆ ಸಮಸ್ಯೆಗೆ ಪರಿಹಾರವೇನೆಂದು ಬಹಳಷ್ಟು ಜನರು ನಾನಾ ಪ್ರಯೋಗಗಳನ್ನು ಮಾಡುತ್ತಾರೆ. ಆದರೆ, ರಾತ್ರಿ ಏಲಕ್ಕಿ ತಿಂದರೆ ಗೊರಕೆ ಸಮಸ್ಯೆಯೂ ಕಡಿಮೆಯಾಗುತ್ತದೆ.
ಮಲಬದ್ಧತೆ ನಿವಾರಿಸಲು ಕೂಡ ಏಲಕ್ಕಿ ಸಹಕಾರಿಯಾಗಿದೆ. ಏಲಕ್ಕಿಯನ್ನು ಮೌತ್ ಫ್ರೆಷನರ್ ರೀತಿಯಲ್ಲೂ ಬಳಸಬಹುದು. ಏಲಕ್ಕಿ ಸೇವನೆಯಿಂದ ಜೀರ್ಣಶಕ್ತಿಯೂ ವೃದ್ಧಿಯಾಗುತ್ತದೆ.
ಪುಡಿ ರೂಪದಲ್ಲಿ ತೆಗೆದುಕೊಂಡಾಗ, ಏಲಕ್ಕಿಯು ರಕ್ತದಲ್ಲಿನ ಸಕ್ಕರೆಯನ್ನು ಕಡಿಮೆ ಮಾಡುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos