ಬೆಂಡಿಗಾನಹಳ್ಳಿಯಲ್ಲಿ ಆಷಾಡ ಏಕಾದಶಿ

ಬೆಂಡಿಗಾನಹಳ್ಳಿಯಲ್ಲಿ ಆಷಾಡ ಏಕಾದಶಿ

ಸೂಲಿಬೆಲೆ,ಜು. 13 :  ನಮ್ಮ ದೇಶವು ವಿವಿಧ ಸಂಸ್ಕೃತಿಯ ತವರೂರು ಅದರಲ್ಲಿ ದಾರ್ಮಿಕತೆಗೆ ಹೆಚ್ಚಿನ ಪ್ರಾಧ್ಯಾನತೆ ನೀಡಲಾಗುತ್ತಿದ್ದು ದಾರ್ಮಿಕ ಕ್ಷೇತ್ರದಲ್ಲಿ ಮಾನಸಿಕ ನೆಮ್ಮದಿ ದೊರೆಯುತ್ತದೆ ಎಂದು ಬೆಂಡಿಗಾನಹಳ್ಳಿ ಚೌಡೇಶ್ವರ ದೇವಾಲಯ ಟ್ರಸ್ಟ್ ಅಧ್ಯಕ್ಷ ಬಿ.ವಿ.ಸತೀಶಗೌಡ ಹೇಳಿದರು.

ಬೆಂಡಿಗಾನಹಳ್ಳಿ ಚೌಡೇಶ್ವರ ದೇವಾಲಯದಲ್ಲಿ ಆಷಾಡ ಮಾಸದ ಏಕಾದಶಿ ಪೂಜಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಹಿಂದುಗಳ ದಾರ್ಮಿಕ ಕಾರ್ಯಕ್ರಮದಲ್ಲಿ ದೇವತೆಗಳಿಗೆ ನಿತ್ಯ ಪೂಜಾ ಕಾರ್ಯಕ್ರಮಗಳು ನೆಡೆಯುತ್ತದೆ, ನಂಬಿಕೆಯೇ ದೇವರು ದೇವರು ಒಬ್ಬ ನಾಮ ಹಲವು ಎಂಬಂತೆ ಪ್ರತಿಯೊಂದು ಒಂದು ಗ್ರಾಮದೇವತೆ ನೆಲೆಗೊಂಡಿರುತ್ತಾಳೆ. ಆ ದೇವಿಯ ಆರಾಧನೆಯಿಂದ ಮಾತ್ರ ಸುಬೀಕ್ಷತೆ ಕಾಣಲು ಸಾಧ್ಯ ಎಂದು ಹೇಳಿದರು.

ದೇವಿಗೆ ಕನಕಾ ದುರ್ಗ ರೂಪಾಲಂಕಾರ ಸೇವೆಯನ್ನು ಬಿ.ವಿ.ಸತೀಶಗೌಡರು ವೈಯಕ್ತಿಕವಾಗಿನೆರವೇಸಿಕೊಟ್ಟರು. ಅನ್ನದಾಸೋಹ ಸೇವೆ ಏರ್ಪಡಿಸಲಾಗಿತ್ತು.

ಜಿ.ಪಂ.ಸದಸ್ಯೆ ಪದ್ಮಾವತಿಮುನೇಗೌಡ ಪೂಜಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು, ಸೌಮ್ಯಸತೀಶಗೌಡ, ಚಿಕ್ಕಹರಳಗೆರೆ ಜಗದೀಶ್, ಟ್ರಸ್ಟ ನ ಪಧಾಧಿಕಾರಿಗಳು ಹಾಜರಿದ್ದರು.

ಫ್ರೆಶ್ ನ್ಯೂಸ್

Latest Posts

Featured Videos