ಬೆಂಕಿ ಇಟ್ಟ ಕಿಡಿಗೇಡಿಗಳು

ಬೆಂಕಿ ಇಟ್ಟ ಕಿಡಿಗೇಡಿಗಳು

ಮುಳಬಾಗಿಲು, ಜು. 6 : ರೇಷ್ಮೆ ಹುಳು ಸಾಕಾಣೆ ಮನೆಗೆ ಕಿಡಿಗೇಡಿಗಳು ಬೆಂಕಿ ಇಟ್ಟಿರುವುದರಿಂದ ಸುಮಾರು 20 ಲಕ್ಷಕ್ಕೂ ಹೆಚ್ಚು ನಷ್ಟವಾಗಿರುವ ಘಟನೆ ನಂಗಲಿ ವ್ಯಾಪ್ತಿಯಲ್ಲಿ ನಡೆದಿದೆ. ಬೇವಹಳ್ಳಿಯ ಬಿ.ಜಿ ರಾಮಕೃಷ್ಣಪ್ಪ ಎಂಬುವವರಿಗೆ ಸೇರಿದ ಹುಳು ಮನೆ ಬೆಂಕಿಯಿಂದ ಸಂಪೂರ್ಣವಾಗಿ ಸುಟ್ಟು ಕರಕಲಾಗಿ, ಬಿಡಿಸಲು ಗೂಡುಗಳ ಸಮೇತ ಇರಿಸಿದ್ದ 300 ಚಂದ್ರಿಕೆಗಳು ಹಾಗೂ ಖಾಲಿಯಾಗಿದ್ದ 600 ಚಂದ್ರಿಕೆಗಳು ಸಂಪೂರ್ಣವಾಗಿ ಸುಟ್ಟು ನಾಶವಾಗಿದೆ ಎಂದು ತಿಳಿದು ಬಂದಿದೆ.
ವಾಸದ ಮನೆಯ ಸ್ವಲ್ಪ ದೂರದಲ್ಲಿ ಕೇವಲ ಒಂದು ವರ್ಷದ ಹಿಂದೆ 15 ಲಕ್ಷ ರೂ.ಗಳನ್ನು ಖರ್ಚು ಮಾಡಿ ಕಟ್ಟಿಸಲಾಗಿದ್ದ ಮನೆಯಲ್ಲಿ 1000 ಮತ್ತು 500 ಮೊಟ್ಟೆಗಳ ಲೆಕ್ಕದಲ್ಲಿ ರೇಷ್ಮೆ ಮೊಟ್ಟೆಯನ್ನು ತಂದು ಸಾಕಲಾಗುತ್ತಿತ್ತು.
ಅದರಂತೆ ಈ ಭಾರಿಯೂ ರೇಷ್ಮೆ ಮೊಟ್ಟೆಯನ್ನು ತಂದು ಸಾಕಿದ್ದರಿಂದ ಒಳ್ಳೆ ಬೆಳೆಯಾಗಿ ಹುಳುಗಳು 300 ಚಂದ್ರಿಕೆಗಳಲ್ಲಿ ಗೂಡು ಕಟ್ಟಿತ್ತು ಮತ್ತು ಬಿಡಿಸಿ ಮಾರುಕಟ್ಟೆಗೆ ಸಾಗಿಸಲು ತಯಾರಾಗಿದ್ದಾವು. ಆದರೆ ಯಾರೋ ದುಷ್ಕರ್ಮಿಗಳು ಸುಮಾರು ಮೂರು ಗಂಟೆಯ ಸಮಯದಲ್ಲಿ ಬೆಂಕಿಯನ್ನು ಹಚ್ಚಿ ಪರಾರಿ ಆಗಿರುವುದರಿಂದ ರೇಷ್ಮೆ ಮನೆ, ಗೂಡು, ಚಂದ್ರಿಕೆಗಳು ಹೀಗೆ ಎಲ್ಲವೂ ಸುಟ್ಟು ಕರಕಲಾಗಿದೆ ಎಂದು ಮಾಲೀಕರು ತಿಳಿಸಿದ್ದಾರೆ.

ಫ್ರೆಶ್ ನ್ಯೂಸ್

Latest Posts

Featured Videos