‘ ಬೆಲ್ ಬಾಟಂ ‘ 100 ದಿನದತ್ತ ಸಾಗುತ್ತಿದೆ

‘ ಬೆಲ್ ಬಾಟಂ ‘ 100 ದಿನದತ್ತ ಸಾಗುತ್ತಿದೆ

ಬೆಂಗಳೂರು, ಮೇ.. 10, ನ್ಯೂಸ್ ಎಕ್ಸ್ ಪ್ರೆಸ್: ‘ ಬೆಲ್ ಬಾಟಂ ‘ ಚಿತ್ರವು ಯಶಸ್ವಿ 100 ನೇ ದಿನದತ್ತ ಮುನ್ನುಗ್ಗುತ್ತಿದೆ. ವಿಶೇಷವೆಂದರೆ, ಈ ಚಿತ್ರವು ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ಒಂದಾಗಿದ್ದು, ಯಶಸ್ವಿ ಶತದಿನೋತ್ಸವ ಆಚರಿಸುತ್ತಿರುವು ಮೊದಲ ಚಿತ್ರವಾಗಿದೆ. ಈ ಸಂತಸವನ್ನು ಚಿತ್ರತಂಡದವರು ಹಂಚಿಕೊಂಡಿದ್ದಾರೆ.

ನಮ್ಮ ಚಿತ್ರವು ಯಶಸ್ವಿ 100 ದಿನದತ್ತ ಸಾಗುತ್ತಿದೆ. ಇದು ಅಪರೂಪವಾದ ದಿನಗಳು ಹಾಗೆಯೇ ನಾವುಗಳೆಲ್ಲಾ ಶ್ರಮಿಸಿದ್ದಕ್ಕೆ ಸಾರ್ಥಕವಾದ ದಿನಗಳಿವು.

ಈ ಚಿತ್ರವನ್ನು ಕಟ್ಟುವುದಕ್ಕೆ ನಿರ್ಮಾಪಕರಿಂದ ಹಿಡಿದು ತಂತ್ರಜ್ಞರು, ಕಲಾವಿದರು, ಮಾಧ್ಯಮದವರು ಹಾಗೂ ಪ್ರೇಕ್ಷಕರು ಸಹ ಕೈ ಹಿಡಿದಿದ್ದಾರೆ. ಎಲ್ಲರಿಗೂ ಧನ್ಯವಾದಗಳು’ ಎಂದು ನಿರ್ದೇಶಕ ಜಯತೀರ್ಥ ಸಂತಸ ವ್ಯಕ್ತಪಡಿಸಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos