ಸೌಂದರ್ಯ ಹೆಚ್ಚಳಕ್ಕೆ ಸಲಹೆಗಳು

ಸೌಂದರ್ಯ ಹೆಚ್ಚಳಕ್ಕೆ ಸಲಹೆಗಳು

ಮಾ. 19, ನ್ಯೂಸ್ ಎಕ್ಸ್ ಪ್ರೆಸ್:  ಹರಿಹರೆಯ ಈ ವಯಸ್ಸೇ 1 ರೀತಿಯಲ್ಲಿ ಆಕರ್ಷಕ.ಈ ವಯಸ್ಸಿನಲ್ಲಿ ಹೆಣ್ಣು ಮಕ್ಕಳು ಲುಕ್ ಬಗ್ಗೆ ಹೆಚ್ಚು ಕಾಳಜಿವಹಿಸುತ್ತಾರೆ.  ಸೌಂದರ್ಯದ ವಿಷಯಕ್ಕೆ ಬಂದರೆ ಹೊಸ ಹೊಸ ಮೇಕಪ್,ತ್ವಚೆಯ ಕಾಳಜಿ ಎಲ್ಲವನ್ನೂ ಪ್ರಯೋಗ ಮಾಡುವ ವಯಸ್ಸಿದು.

ನೀವು ಚಂದ ಕಾಣಬೇಕು ಎಂಬ ನಿರಂತರ ಪ್ರಯತ್ನ ಈ ವಯಸ್ಸಿನಲ್ಲಿ ನಡೆಯುತ್ತಲೇ ಇರುತ್ತದೆ. ಸುಂದರ ಮಹಿಳೆಯಾಗಬೇಕೆಂಬ ಹಂಬಲ ಈ ಸಮಯದಲ್ಲಿ ಸಹಜ. ನಿಮ್ಮ ತ್ವಚೆ ಸ್ವಚ್ಛ ಮತ್ತು ಕಾಂತಿಯುತವಾಗಿರಲು ನೀರಿನ ಅಗತ್ಯವಿದೆ. ಕಪ್ಪು ಕಲೆ,ಮೊಡವೆ ಇವುಗಳನ್ನು ತಡೆಯಲು ಮಾತ್ರವಲ್ಲ ಆರೋಗ್ಯಕ್ಕೆ ಕೂಡ ನೀರಿನ ಅವಶ್ಯಕತೆ ಇದೆ. ಆದ್ದರಿಂದ ಹೆಚ್ಚು ನೀರು ಸೇವಿಸಿ .

ಮೇಕಪ್ ಮಾಡುವಾಗ ಫೌಂಡೇಶನ್ ಬಳಸುವ ಬಯಕೆ ಸಾಮಾನ್ಯ ಆದರೆ ಇದು ತರುಣಿಯರಿಗೆ ಸೂಕ್ತವಲ್ಲ. ನಿಮ್ಮ ಫ್ರೆಶ್ ಆಗಿರುವ, ತಾರುಣ್ಯದಿಂದ ಕೂಡಿರುವ ತ್ವಚೆಗೆ ಫೌಂಡೇಶನ್ ಕ್ರೀಂ ಬಳಸಬೇಡಿ. ಆದರೂ ನಿಮಗೆ ಮೇಕಪ್ ಮಾಡಬೇಕೆಂದಿದ್ದಲ್ಲಿ ಕನ್ಸೀಲರ್ ಬಳಸಿ ಮೇಲೆ ಪೌಡರ್ ಅಥವಾ ಟಿಂಟೆಡ್ ಮಾಸ್ಚುರೈಸರ್ ಬಳಸಿ. ಟಿಂಟೆಡ್ ಮಾಸ್ಚುರೈಸರ್ ಫೌಂಡೇಶನ್ ಕ್ರೀಮಿಗಿಂತ ಹೆವಿಯಾಗಿರುತ್ತದೆ.

ಒಂದೇ ಬಾರಿ ಕೂದಲಿನ ಸಂಪೂರ್ಣ ಬಣ್ಣ ಬದಲಿಸುವ ಪ್ರಯತ್ನ ಬೇಡ. ನ್ಯಾಚುರಲ್ ಕೇಶರಾಶಿ ಸುಂದರವಾಗಿರುತ್ತದೆ. ನಿಮ್ಮದು ಕಪ್ಪು ಕೂದಲಾಗಿದ್ದಲ್ಲಿ ಡಾರ್ಕ್ ಶೇಡ್ ಕೊಡಿ ಅಥವಾ ಲೈಟ್ ಹೈಲೈಟ್ ಮಾಡಿ.

ನಿಮ್ಮ ಸುಂದರವಾದ ಕೂದಲಿಗೆ ಒಂದು ಬಾಟಲಿಯ ಸಂಪೂರ್ಣ ಬಣ್ಣ ಉಪಯೋಗಿಸಿ ಕೂದಲಿಗೆ ವಿವಿಧ ಬಣ್ಣದ ಡೈ ಹಾಕುವ ಪ್ರಯತ್ನ ಮಾಡಬೇಡಿ ಇದು ಕೂದಲಿನ ಅಂದವನ್ನು ಹಾಳುಮಾಡುತ್ತದೆ. ಹೆಚ್ಚಿನ ಹೆಣ್ಣು ಮಕ್ಕಳು, ಅಷ್ಟೇ ಏಕೆ ಫಿಲಂ ಸ್ಟಾರ್ ಗಳೂ ಕೂಡ ಕಡಿಮೆ ಮೇಕಪ್ ನಲ್ಲಿ ಸುಂದರವಾಗಿ ಕಾಣಿಸುತ್ತಾರೆ. ಮೇಕಪ್ ಅತಿಯಾದಲ್ಲಿ ಎಂತವರು ಕೂಡ ಫ್ರೀಕ್ ಆಗಿ ಕಾಣುತ್ತಾರೆ. ಹರಿಹರೆಯದ ವಯಸ್ಸಿಗೆ ಗ್ಲಾಸ್ ಲುಕ್ ನೀಡಲು ಕಣ್ಣಿಗೆ ಮಸ್ಕರಾ ಮತ್ತು ಕನ್ಸೀಲರ್ ಬಳಸಿದರೆ ಸಾಕಾಗುತ್ತದೆ.ಚಳಿಗಾಲದಲ್ಲಿ ಬೇಕಿದ್ದರೆ ಬ್ಲಶ್ ಕೂಡ ಬಳಸಬಹುದು.

ಕನ್ಸೀಲರ್ ಬಳಸುವ ಮೊದಲ ನಿಯಮ ಅದನ್ನು ರಬ್ ಮಾಡದೇ ಪ್ಯಾಟ್ ಮಾಡುವುದು. ಆದ್ದರಿಂದ ನೀವು ಕನ್ಸೀಲರ್ ಬಳಸುವಾಗ ಮಧ್ಯ ಬೆರಳಿಗೆ ಸ್ವಲ್ಪ ಹಾಕಿಕೊಂಡು ಮುಖದ ಮೇಲೆ ಪ್ಯಾಟ್ ಮಾಡಿ,ರಬ್ ಮಾಡಬೇಡಿ.

ಕಣ್ಣಿನ ಮೇಕಪ್ ತೆಗೆಯಲು ವ್ಯಾಸಲಿನ್ ಅಗ್ಗದ ವಿಧಾನ. ಅಷ್ಟೇ ಅಲ್ಲ ಒಡೆದ ತುಟಿಯನ್ನು ಸರಿಪಡಿಸಲು ಕೂಡ ಇದು ಪ್ರಯೋಜಕ. ಟೂತ್ ಬ್ರಷ್ ಗೆ ಸ್ವಲ್ಪ ವ್ಯಾಸಲಿನ್ ಬಳಸಿ ತುಟಿಯ ಮೇಲೆ ಉಜ್ಜಿ. ನಂತರ ಹೆಚ್ಚಿನ ವ್ಯಾಸಲಿನ್ ಅನ್ನು ಒರೆಸಿಕೊಳ್ಳಿ ಸುಂದರವಾದ ತುಟಿ ನಿಮ್ಮದಾಗುತ್ತದೆ.

ನಿಮ್ಮ ತುಟಿಗೆ ಅತಿಯಾದ ಲಿಪ್ಸ್ಟಿಕ್ ಮತ್ತು ಕಣ್ಣಿಗೆ ಅತಿಯಾಗಿ ಕಾಡಿಗೆ ಹಚ್ಚಿಕೊಳ್ಳಬೇಡಿ. ಕಣ್ಣಿಗೆ ಘಾಡ ಬಣ್ಣ ಹಚ್ಚಿದರೆ ತುಟಿಗೆ ಲೈಟ್ ಆಗಿರಲಿ. ಹಾಗೆಯೇ ನಿಮ್ಮ ಲಿಪ್ಲೈನ್ ಬಣ್ಣ ಲಿಪ್ಸ್ಟಿಕ್ ಬಣ್ಣಕ್ಕಿಂತ ಘಾಡವಾಗಿರದಿರಲಿ. ಹದಿಹರೆಯದ ಜೀವನ ಒಂದು ರೀತಿಯ ಮೋಜು, ನೈಜವಾಗಿದ್ದಷ್ಟು ಸುಂದರ. ಅದನ್ನು ಓವರ್ ಮೇಕಪ್ ಮಾಡಿಕೊಳ್ಳುವುದರ ಮೂಲಕ ಸಹಜ ಸೌಂದರ್ಯವನ್ನು ಮರೆಮಾಚಿ ವಯಸ್ಕ ಮಹಿಳೆಯಂತೆ ಕಾಣಬೇಡಿ.

 

 

ಫ್ರೆಶ್ ನ್ಯೂಸ್

Latest Posts

Featured Videos