ಅಕ್ಕಿ ತೊಳೆದ ನೀರಿನಲ್ಲಿ ನಮ್ಮ ಸೌಂದರ್ಯ ಅಡಗಿದೆ

ಅಕ್ಕಿ ತೊಳೆದ ನೀರಿನಲ್ಲಿ ನಮ್ಮ ಸೌಂದರ್ಯ ಅಡಗಿದೆ

ಬೆಂಗಳೂರು: ಸಾಮಾನ್ಯವಾಗಿ ನಾವು ಮನೆಯಲ್ಲಿ ಅನ್ನ ಮಾಡುವಾಗ ಅಕ್ಕಿಯನ್ನು ತೊಳೆದು ಆ ನೀರನ್ನು ಚೆಲ್ಲುತ್ತೇವೆ‌ ಅಥವಾ ಹಸುಗಳಿಗೆ ಕುಡಿಸುತ್ತೇವೆ. ಇದು ಎಲ್ಲರೂ ಮಾಡುವುದೇ. ಅಕ್ಕಿ ತೊಳೆದ ನೀರು ಅಥವಾ ಗಂಜಿ ನೀರು ನಮ್ಮ ಚರ್ಮದ ಸೌಂದರ್ಯ ಹೆಚ್ಚಿಸುವಲ್ಲಿ ಪ್ರಧಾನ ಪಾತ್ರ ವಹಿಸಬಲ್ಲದು. ಮುಖದ ಸೌಂದರ್ಯ ಹೆಚ್ಚಿಸಲು, ಹಾಗೂ  ಮುಖದ ಮೇಲಿನ ಮೊಡವೆಗಳನ್ನು ದೂರ ಮಾಡಿಕೊಳ್ಳುಬಹುದಲ್ಲದೇ ನಮ್ಮ ಸೌಂದರ್ಯವನ್ನು ಮತ್ತಷ್ಟು ಹೆಚ್ಚಿಸಿಕೊಳ್ಳಬಹುದಂತೆ.

ಅಕ್ಕಿ ತೊಳೆದ ನೀರನ್ನು ಹತ್ತಿ ಅಥವಾ ಶುದ್ಧವಾದ ಬಟ್ಟೆ ಉಪಯೋಗಿಸಿಕೊಂಡು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಮುಖದ ಕಾಂತಿಯು ಹೆಚ್ಚಾಗುತ್ತದೆ.ಅಕ್ಕಿ ತೊಳೆದ ನೀರನ್ನು ಚರ್ಮದ ಫೇಶಿಯಲ್ ಆಗಿ ಬಳಸಬಹುದು.ಮುಖವು ಕೆಂಪಾಗುವುದು, ಚರ್ಮದ ಅಲರ್ಜಿ ಸೇರಿದಂತೆ ಇನ್ನಿತ್ತರ ಸಮಸ್ಯೆಯಿದ್ದರೆ ಅಕ್ಕಿ ನೀರಿನಿಂದ ಮುಖ ತೊಳೆಯುವುದು ಪರಿಣಾಮಕಾರಿ.

ಕೂದಲಿನ ಆರೈಕೆಗೆ ಅಕ್ಕಿ ತೊಳೆದ ನೀರನ್ನು ನಿಮ್ಮ ಕೂದಲಿಗೆ ಹಚ್ಚಿದರೆ ಕೂದಲ ಹೊಳಪು ಹೆಚ್ಚುತ್ತದೆ.ಅಕ್ಕಿ ನೀರಿಗೆ ಲ್ಯಾವೆಂಡರ್ ಎಣ್ಣೆ ಮತ್ತು ಆಲಿವ್ ಎಣ್ಣೆಯನ್ನು ಮಿಶ್ರಣ ಮಾಡಿ, ಕೂದಲಿಗೆ ಅಕ್ಕಿ ನೀರಿನಿಂದ ತೊಳೆದರೆ ಕೂದಲ ಆರೋಗ್ಯವನ್ನು ಕಾಪಾಡಬಹುದು.

ಅಕ್ಕಿ ತೊಳೆದ ನೀರು ಕುಡಿಯುವುದರಿಂದ ಉರಿಯೂತ, ಅತಿಸಾರ ಸಮಸ್ಯೆಗಳು ಕಡಿಮೆಯಾಗುತ್ತದೆ. ಬೇಸಿಗೆಗಾಲದಲ್ಲಿ ಕಾಡುವ ಬೆವರು ಗುಳ್ಳೆಯ ಸಮಸ್ಯೆಗೆ ಅಕ್ಕಿ ತೊಳೆದ ನೀರಿನಿಂದ ಸ್ನಾನ ಮಾಡುವುದು ಪರಿಣಾಮಕಾರಿಯಾಗಿದೆ.ಅಕ್ಕಿ ನೀರಿನಲ್ಲಿ ಉಪ್ಪು, ತುಪ್ಪ, ಕರಿಮೆಣಸು ಬೆರೆಸಿ ಸೇವಿಸದರೆ ಜೀರ್ಣಕ್ರಿಯೆ ಸುಧಾರಿಸುತ್ತದೆ.

ಬೇಸಿಗೆಗಾಲದಲ್ಲಿ ಅಕ್ಕಿ ನೀರನ್ನು ಕುಡಿದರೆ ದೇಹ ಹೈಡ್ರೇಟೆಡ್ ಆಗಿರುವುದಲ್ಲದೆ ಉತ್ತಮ ಮನೆ ಮದ್ದು. ಅಕ್ಕಿ ತೊಳೆದ ನೀರನ್ನು ಸೇವಿಸುವುದರಿಂದ ವಾಂತಿ ಅಥವಾ ಜ್ವರ ಹೀಗೆ ಯಾವುದೇ ಆರೋಗ್ಯ ಸಮಸ್ಯೆಯು ದೂರವಾಗುತ್ತದೆ.

ಅಕ್ಕಿ ತೊಳೆದ ನೀರಿಗೆ ಕಿತ್ತಳೆ ಹಣ್ಣಿನ ಸಿಪ್ಪೆ, ನಿಂಬೆ ಹಣ್ಣಿನ ಸಿಪ್ಪೆಯನ್ನು ಮಿಶ್ರಣ ಮಾಡಿದರೆ ಹಚ್ಚಿಕೊಂಡರೆ ಚರ್ಮದ ಆರೋಗ್ಯವು ಸುಧಾರಿಸುತ್ತದೆ. ಬೇಸಿಗೆಗಾಲದಲ್ಲಿ ಬಿಸಿಲಿಗೆ ಮುಖವು ಕಪ್ಪಗಾಗಿದ್ದರೆ ಅಕ್ಕಿ ತೊಳೆದ ನೀರಿಗೆ ಅಲೋವೆರಾ ಜೆಲ್ ಹಾಗೂ ರೋಸ್ ವಾಟರ್ ಬೆರಸಿ ಚೆನ್ನಾಗಿ ಬೆರೆಸಿ ಮುಖಕ್ಕೆ ಹಚ್ಚಿಕೊಂಡರೆ ಮುಖದ ಹೊಳಪು ಹೆಚ್ಚಾಗುತ್ತದೆ.

ಫ್ರೆಶ್ ನ್ಯೂಸ್

Latest Posts

Featured Videos