ಸುಂದರ ತ್ವಚೆಗೆ ಆಲೂಗಡ್ಡೆ ಮನೆಮದ್ದು

ಸುಂದರ ತ್ವಚೆಗೆ ಆಲೂಗಡ್ಡೆ ಮನೆಮದ್ದು

ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ನಮ್ಮ ಕೆಲಸದ ಒತ್ತಡದಲ್ಲಿ ನಮ್ಮ ಸೌಂದರ್ಯಕ್ಕೆ ನಾವು ಹೆಚ್ಚು ಗಮನವಹಿಸಲು ಸಾಧ್ಯವಾಗುವುದಿಲ್ಲ ಇದರಿಂದ ನಾವು ಅನೇಕ ಬ್ಯೂಟಿ ಉತ್ಪನ್ನಗಳಿಗೆ ಅವಲಂಬಿತರಾಗಿರುತ್ತೀರಿ ಇದರಿಂದ ನಮ್ಮ ಚರ್ಮಕ್ಕೂ ಅನೇಕ ನಾವು ದಿನನಿತ್ಯ ಬಳಸುವಂತಹ ಪದಾರ್ಥಗಳಲ್ಲಿ ನಮ್ಮ ಸೌಂದರ್ಯವನ್ನು ಹೆಚ್ಚಿಸಬಹುದು.

ಆಲೂಗಡ್ಡೆ ಉತ್ತಮ ತರಕಾರಿ ಮಾತ್ರವಲ್ಲ ಇದು ನಿಮ್ಮ ಚರ್ಮದ ಕಲೆಗಳನ್ನು ತೆಗೆದುಹಾಕುವ ಸಾಮರ್ಥ್ಯ ಹೊಂದಿದೆ. ಆಲೂಗಡ್ಡೆ ಫೇಸ್ ಪ್ಯಾಕ್ ಮಾಡಿಕೊಳ್ಳುವುದರಿಂದ ಇದು ನಿಮ್ಮ ಮುಖದ ಹೊಳಪನ್ನು ಹೆಚ್ಚಿಸುತ್ತದೆ ಮತ್ತು ಮೊಡವೆ, ಕಪ್ಪು ಕಲೆಗಳನ್ನು ಕಡಿಮೆ ಮಾಡುತ್ತದೆ. ಆಲೂಗೆಡ್ಡೆ ಫೇಸ್ ಪ್ಯಾಕ್‌ ತ್ವಚೆಯ ಆರೈಕೆಯಲ್ಲಿ ಜನಪ್ರಿಯವಾಗಿದ್ದರೂ, ಕಪ್ಪು ಕಲೆಗಳು ಮತ್ತು ಮೊಡವೆಗಳನ್ನು ಪರಿಹರಿಸುವಲ್ಲಿ ಅವುಗಳ ಪರಿಣಾಮಕಾರಿ.

ಆಲೂಗಡ್ಡೆಯ ಪೇಸ್ಟ್, ಮುಲ್ತಾನಿ ಮಿಟ್ಟಿ, ಕೆಲವು ಹನಿ ನಿಂಬೆ ರಸ ಮತ್ತು ಅಲೋವೆರಾ ಜೆಲ್ ಸೇರಿಸಿಕೊಂಡು ಫೇಸ್​ಪ್ಯಾಕ್ ಮಾಡಿಕೊಳ್ಳುವುದರಿಂದ ನಿಮ್ಮ ಚರ್ಮವನ್ನು ಹೊಳೆಯುವಂತೆ ಮಾಡುತ್ತದೆ. ಆಲೂಗಡ್ಡೆಯ ಪೇಸ್ಟ್, ಮುಲ್ತಾನಿ ಮಿಟ್ಟಿ, ಕೆಲವು ಹನಿ ನಿಂಬೆ ರಸ ಮತ್ತು ಅಲೋವೆರಾ ಜೆಲ್ ಸೇರಿಸಿ ಪೇಸ್ಟ್ ಮಾಡಿಕೊಂಡು, ಅದನ್ನು ಬ್ರಷ್ ಅಥವಾ ಹತ್ತಿಯಿಂದ ಮುಖಕ್ಕೆ ಹಚ್ಚಿಕೊಳ್ಳಿ. 15 ನಿಮಿಷಗಳ ಕಾಲ ಅದನ್ನು ಬಿಟ್ಟು, ನಂತರ ಮುಖವನ್ನು ತೊಳೆಯಿರಿ.

 

 

ಫ್ರೆಶ್ ನ್ಯೂಸ್

Latest Posts

Featured Videos