ಅರ್ಧ ಗಡ್ಡ, ಮೀಸೆ ಬೋಳಿಸಿದ ಕಾಲಿಸ್..!

ಅರ್ಧ ಗಡ್ಡ, ಮೀಸೆ ಬೋಳಿಸಿದ ಕಾಲಿಸ್..!

ದಕ್ಷಿಣ ಆಫ್ರಿಕಾ, ನ. 30 : ದಕ್ಷಿಣ ಆಫ್ರಿಕಾದ ಮಾಜಿ ಕ್ರಿಕೆಟಿಗ ಜಾಕ್ ಕಾಲಿಸ್, ಅರ್ಧ ದಾಡಿ ಮತ್ತು ಮೀಸೆ ತೆಗೆದಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ವಿಶ್ವದ ಶ್ರೇಷ್ಠ ಆಲ್ರೌಂಡರ್ ಆಟಗಾರರಲ್ಲಿ ಕಾಣಿಸಿಕೊಂಡ ಕಾಲಿಸ್ ಚಿತ್ರ ನೋಡಿದ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸುವ ಜೊತೆಗೆ ಯಾಕೆ ಹೀಗೆ ಮಾಡಿದರು? ಎಂಬ ಪ್ರಶ್ನೆ ಎತ್ತಿದ್ದಾರೆ. ಇತ್ತೀಚಿಗೆ ದಕ್ಷಿಣ ಆಫ್ರಿಕಾದಲ್ಲಿ ಘೆಂಡಾ ಮೃಗಗಳ ಸಾವಿನ ಸಂಖ್ಯೆ ಹೆಚ್ಚಾಗುತ್ತಿದೆ. ಘೆಂಡಾ ಮೃಗಗಳ ರಕ್ಷಣೆಗಾಗಿ ಹಣ ಸಂಗ್ರಹ ಮಾಡಲು ಕಾಲಿಸ್ ಈ ರೀತಿಯ ವಿಭಿನ್ನ ಚಾಲೆಂಜ್ ಸ್ವೀಕರಿಸಿದ್ದಾರಂತೆ.

ಫ್ರೆಶ್ ನ್ಯೂಸ್

Latest Posts

Featured Videos