ಪಟಾಕಿ ಹೊಡೆಯುವ ಸಂಭ್ರಮದಲ್ಲಿ ನೆರೆಹೊರೆಯವರ ಹಿತ ಮರೆಯದಿರಿ

ಪಟಾಕಿ ಹೊಡೆಯುವ ಸಂಭ್ರಮದಲ್ಲಿ ನೆರೆಹೊರೆಯವರ ಹಿತ ಮರೆಯದಿರಿ

ಬೆಂಗಳೂರು, ಅ. 24: ನಮ್ಮ ಕುಟುಂಬದ ಸಂಭ್ರಮಕ್ಕಾಗಿ ಸಿಡಿಸುವ ಪಟಾಕಿ, ಮತ್ತೊಬ್ಬರ ಬಾಳನ್ನು ಕತ್ತಲಿಗೆ ದೂಡುತ್ತದೆ. ಪರಿಸರ ಹಾಗೂ ನೆರೆಹೊರೆಯವರ ಹಿತ ಕಾಯುವುವುದರ ಜೊತೆಗೆ ಪರಿಸರ ರಕ್ಷಣೆಯ ಹಬ್ಬಕ್ಕೆ ಒತ್ತು ನೀಡಿ.

ಪಟಾಕಿ ಶಬ್ದ ಹೃದ್ರೊಗಿಗಳು ಮತ್ತು ಅಸ್ತಮ ರೋಗಿಗಳನ್ನು ಘಾಸಿಗೊಳಿಸುತ್ತದೆ. ಅಷ್ಡೆ ಏಕೆ ಪ್ರಾಣಿ, ಪಕ್ಷಿಗಳಲ್ಲೂ ಭೀತಿ ಉಂಟುಮಾಡಲಿದೆ.ದೀಪಾವಳಿ ಹಬ್ಬ ಪಟಾಕಿ ಹೊಡೆಯುವವರಿಗೆ ಸಡಗರದ ಧೋತಕವಾದರೆ, ಪಟಾಕಿಯಿಂದ ಹೊರಹೊಮ್ಮುವ ಹೊಗೆ ಮತ್ತು ಶಬ್ದ ಅಸ್ತಮಾ ಹಾಗೂ ಹೃದ್ರೊಗಿಗಳ ಪಾಲಿಗೆ ನರಕಸದೃಶ. ಪಟಾಕಿ ಸಿಡಿತದಿಂದ ಪ್ರತಿ ವರ್ಷ ನೂರಾರು ಮಂದಿ ದೃಷ್ಟಿ ಕಳೆದುಕೊಳ್ಳುತ್ತಾರೆ, ಸುಟ್ಟಗಾಯಗಳಿಗೆ ಒಳಗಾಗುತ್ತಾರೆ. ಪಟಾಕಿಯಿಂದ ಹೊರಹೊಮ್ಮುವ ರಾಸಾಯನಿಕ ಮಿಶ್ರಿತ ಹೊಗೆಯಿಂದ ತೊಂದರೆಗಳು ಉಂಟಾಗುತ್ತವೆ ಎಂದು ವೈದ್ಯರು ಸಲಹೆ ನೀಡಿದ್ದಾರೆ.

ಮಕ್ಕಳಿಗೆ ಹೆಚ್ಚು ಸಮಸ್ಯೆ

ದೇಶದಲ್ಲಿ 18 ವರ್ಷದೊಳಗಿನ ಶೇ. 28.5 ಮಕ್ಕಳು ಅಸ್ತಮಾದಿಂದ ಬಳಲುತ್ತಿದ್ದಾರೆ. ಶೇ. 40 ಜನರು ಮೂಗಿನ ಅಲರ್ಜಿ, ಶೇ. 27 ಮಂದಿ ಕಣ್ಣಿನ ಅಲರ್ಜಿ, ಶೇ. 21.25 ಮಂದಿ ದೀರ್ಘಕಾಲದ ಕೆಮ್ಮಿನಿಂದ ಬಳಲುತ್ತಿದ್ದಾರೆ.

ಪಟಾಕಿಯಿಂದಾಗುವ ಅಡ್ಡ ಪರಿಣಾಮಗಳು

*ಪಟಾಕಿಯಿಂದ ಹೊರಹೊಮ್ಮುವ ರಾಸಾಯನಿಕ ಮಿಶ್ರಿತ ಹೊಗೆ ಕೆಮ್ಮು, ಸೀನು, ಗಂಟಲು ನೋವು, ಮೂಗು ಸೋರುವಿಕೆ, ಉಸಿರಾಟ ಹಾಗೂ ಶ್ವಾಸಕೋಶದ ತೊಂದರೆ, ಹೃದ್ರೊಗ ಹಾಗೂ ಅಸ್ತಮಾಗೆ ದಾರಿ ಮಾಡಿಕೊಡುತ್ತದೆ.

*ಹೆಚ್ಚು ಶಬ್ದ ಉಂಟುಮಾಡುವ ಪಟಾಕಿಗಳು ಹೃದ್ರೊಗಿಗಳ (ಸ್ಟಂಟ್ ಹಾಕಿಸಿಕೊಂಡವರಿಗೆ ತೊಂದರೆ ಹೆಚ್ಚು) ಘಾಸಿಗೊಳಿಸುತ್ತದೆ.

*ಕಿವಿಯ ಸೋಂಕು ಹೊಂದಿದ್ದವರಿಗೆ ಪಟಾಕಿಯ ಕರ್ಕಶ ಶಬ್ದ ಕೇಳಿಸಿದರೆ ಕಿವಿ ನೋವು ಹಾಗೂ ಸೋರುವಿಕೆಗೆ ಕಾರಣವಾಗುತ್ತದೆ.

*ಕಣ್ಣಿಗೆ ಕಿಡಿ ತಾಗಿದರೆ ದೃಷ್ಟಿ ಕಳೆದುಕೊಳ್ಳುವ ಸಾಧ್ಯತೆಗಳು ಹೆಚ್ಚು. ಸುಟ್ಟಗಾಯಗಳು ಆಗುತ್ತವೆ.

ಮುನ್ನೆಚ್ಚರಿಕೆ ಕ್ರಮಗಳು

*ಅಸ್ತಮಾ ರೋಗಿಗಳು ಪಟಾಕಿ ಹೊಡೆಯುವ ಒಂದು ತಾಸಿಗೂ ಮುನ್ನ ಮಾತ್ರೆಗಳನ್ನು ಸೇವಿಸಬೇಕು.

*ಇನ್ಹೇಲರ್ ಬಳಸುವವರು 15 ನಿಮಿಷ ಮುಂಚಿತವಾಗಿ ಎರಡು ಪಫ್ ತೆಗೆದುಕೊಳ್ಳಬೇಕು. ಮೂಗಿಗೆಬಟ್ಟೆ ಕಟ್ಟಿಕೊಳ್ಳಬೇಕು.

*ಪಟಾಕಿ ಹೊಗೆಯಿಂದ ಉಸಿರಾಟದ ತೊಂದರೆ ಉಂಟಾದರೆ ಕೂಡಲೇ ಬಿಸಿನೀರಿನ ಹೊಗೆ ತೆಗೆದುಕೊಂಡು ವೈದ್ಯರ ಬಳಿ ಹೋಗುವುದು ಕಡ್ಡಾಯ

*ಹೃದ್ರೊಗಿಗಳು ಹಾಗೂ ಕಿವಿ ಸಮಸ್ಯೆ ಇರುವವರು ಕಿವಿಗೆ ಶಬ್ದ ಬೀಳದಂತೆ ಹತ್ತಿ ಇರಿಸಿಕೊಳ್ಳಬೇಕು.

*ಪಟಾಕಿ ಹೊಗೆಯಿಂದ ಕಣ್ಣಿನ ಅಲರ್ಜಿ ತಡೆಯಲು ಕನ್ನಡಕ ಧರಿಸಬೇಕು.

ಹೃದಯಾಘಾತಕ್ಕೆ ಇರುವ ಕಾರಣಗಳಲ್ಲಿ ವಾಯುಮಾಲಿನ್ಯವೂ ಒಂದು. ಹೀಗಾಗಿ ಹೃದ್ರೊಗಿಗಳು ಪಟಾಕಿಯ ಹೊಗೆ ಸೇವಿಸದಂತೆ ಎಚ್ಚರ ವಹಿಸಬೇಕು. ಕಾರ್ಯ ನಿಂತು ಹೋಗುವ ಸಾಧ್ಯತೆಗಳು ಹೆಚ್ಚಿರುತ್ತದೆ. ಹೀಗಾಗಿ ಹೃದ್ರೊಗಿಗಳು ಪಟಾಕಿ ಹೊಗೆ ಹಾಗೂ ಶಬ್ದಗಳಿಂದ ದೂರ ಉಳಿಯುವುದು ಒಳಿತು.

ಶೇ. 40 ಮಂದಿ ಶ್ವಾಸಕೋಶದ ಸಮಸ್ಯೆಗೆ ಒಳಗಾಗಿ ಉಸಿರಾಟದ ತೊಂದರೆಗೆ ಒಳಗಾಗಿದ್ದಾರೆ. ಇದಕ್ಕೆ ಕಾರಣ ಹೆಚ್ಚುತ್ತಿರುವ ವಾಯುಮಾಲಿನ್ಯ. ಹೀಗಾಗಿ ಪಟಾಕಿಯಿಂದ ಹೊರಹೊಮ್ಮುವ ರಾಸಾಯನಿಕ ಹೊಗೆ ಅಸ್ತಮಾ ಹಾಗೂ ಅಲರ್ಜಿ ಸಮಸ್ಯೆ ಹೊಂದಿದವರಿಗೆ ಮತ್ತಷ್ಟು ಸಮಸ್ಯೆ ತಂದೊಡ್ಡಲಿದೆ.

 

 

 

 

ಫ್ರೆಶ್ ನ್ಯೂಸ್

Latest Posts

Featured Videos