ಬಿಡಿಎ ಕೇಂದ್ರ ಕಚೇರಿ ಮುಂದೆ ಧರಣಿ

ಬಿಡಿಎ ಕೇಂದ್ರ ಕಚೇರಿ ಮುಂದೆ ಧರಣಿ

ಬೆಂಗಳೂರು, ಡಿ. 30: ಬಿ.ಡಿ.ಎ.ಯು ಪೆರಿಫೆರಲ್  ರಿಂಗ್ ರಸ್ತೆ ಯೋಜನೆಗೆ ಸ್ವಾದೀನ ಪಡಿಸಿಕೊಳ್ಳತ್ತಿರುವ ರೈತರ ಭೂಮಿಗೆ ನ್ಯಾಯವಾದ ಪರಿಹಾರ ನೀಡಬೇಕೆಂದು ರ‍್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಜ. 7 ರಂದು ಬೆಳಗ್ಗೆ 11 ರಂದು ಬಿಡಿಎ ಕೇಂದ್ರ ಕಚೇರಿ ಮುಂದೆ ಅಹೋ ರಾತ್ರಿ ಧರಣಿ ಸತ್ಯಾಗ್ರಹ ಮಾಡಲು ನರ‍್ಧಿರಿಸಿದೆ

ಸುದ್ದಿಗೋಷ್ಟಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರ ಶೇಖರ ಮಾತನಾಡಿ, ಬಿಡಿಎ ಸಂಸ್ಥೆಯ ಹುನ್ನಾರದಿಂದ ನಮ್ಮ ಜಮೀನಿನ  ಬೆಲೆ ಹೆಚ್ಚಾಗಲಿಲ್ಲ. ರಸ್ತೆ ಹಾದು ಹೋಗುವ ಎಲ್ಲ ಹಳ್ಳಿಗಳ ನೋಂದಣಿ ಬೆಲೆ ಹೆಚ್ಚಿಸದಂತೆ ನರ‍್ದಿಷ್ಟವಾಗಿ ಅಧಿಕೃತವಾಗಿ ಪತ್ರದ ಮೂಲಕ ಜಿಲ್ಲಾ ನೋಂದಣಾಧಿಕಾರಿಗಳಿಗೆ ತಿಳಿಸಿ ಬೆಲೆ ನಿಯಂತ್ರಿಸಿದ್ದಾರೆ. ಈ 67 ಹಳ್ಳಿಗಳಲ್ಲಿ ಮಾರುಕಟ್ಟೆ ಮೌಲ್ಯವು 3 ರಿಂದ 5 ಕೋಟಿಗಿಂತ ಕಡಿಮೆ ಇರುವುದಿಲ್ಲ. ಆದ್ದರಿಂದ ನ್ಯಾಯಬದ್ಧವಾಗಿ ರೈತರ ಭೂಮಿಗೆ ಬೆಲೆ ನಿಗಧಿ ಮಾಡಬೇಕೆಂದು ಒತ್ತಾಯಿಸಿದರು.

ಪ್ರತಿ ಎಕರೆ ಭೂ ಸ್ವಾಧಿನ ಐದು ಕೋಟಿ ರು ರೈತರಿಗೆ ನೀಡಬೇಕು. ರ‍್ಕಾರಿ ಕಾಮಗಾರಿ ಯೋಜನೆಗೆ ಜಮೀನುಕಳೆದುಕೊಳ್ಳುವ ರೈತನಿಗೆ ಎಕರೆಗೆ ಹೆಚ್ಚುವರಿಯಾಗಿ ಎರಡು ಕೋಟಿ ಹಣ ನೀಡಬೇಕು. ರೈತರ ಜಮೀನಿಗೆ ನ್ಯಾಯವಾದ ಬೆಲೆಯನ್ನು ನೀಡಲು ಯೋಗ್ಯತೆ ಇಲ್ಲದಿದ್ದರೆ ರ‍್ಕಾರ ತಕ್ಷಣ ಯೋಜನೆ ಕೈಬಿಡಬೇಕು ಸೇರಿದಂತೆ  ನ್ಯಾಯಯುತ ಬೆಲೆ ನೀಡು ಬೇಡಿಕೆ  ಈಡೇರಿಕೆಗೆ ಅವರು ಒತ್ತಾಯಿದ್ದಾರೆ.

 

ಫ್ರೆಶ್ ನ್ಯೂಸ್

Latest Posts

Featured Videos