ಬಿಬಿಎಂಪಿಗೆ ತಲೆನೋವಾದ ಡೆಂಗಿ ಮಹಾಮಾರಿ..!

ಬಿಬಿಎಂಪಿಗೆ ತಲೆನೋವಾದ ಡೆಂಗಿ ಮಹಾಮಾರಿ..!

ಬೆಂಗಳೂರು, ಮೇ. 17, ನ್ಯೂಸ್ ಎಕ್ಸ್ ಪ್ರೆಸ್ : ಬೆಂಗಳೂರಿನ ಜನರೇ ಹುಷಾರ್..! ಮುಂಗಾರು ಮಳೆ ಪ್ರವೇಶಕ್ಕೂ ಮುನ್ನವೇ ‘ಸಿಲಿಕಾನ ಸಿಟಿ’ ಬೆಂಗಳೂರಿನಲ್ಲಿ ಡೆಂಗಿ ಡಂಗೂರ ಬಾರಿಸುತ್ತಿದೆ. ಡೆಂಗಿ ನಗರಕ್ಕೆ ಕಾಲಿರಿಸಿದ್ದು, ಈ ವರ್ಷದ  5 ತಿಂಗಳಲ್ಲಿ 350ಕ್ಕೂ ಹೆಚ್ಚು ಜನರಲ್ಲಿ ಡೆಂಗಿ ಜ್ವರ ಕಾಣಿಸಿಕೊಂಡಿದೆ. ಸೋಂಕು ಹರಡುವ ಸೊಳ್ಳೆಯ ನಿಯಂತ್ರಣ ಮಾಡೋದೇ ಬಿಬಿಎಂಪಿಗೆ ಸವಾಲಾಗಿ ಪರಿಣಮಿಸಿದೆ.

ಸೊಳ್ಳೆ ನಿಯಂತ್ರಣಕ್ಕೆ ಧೂಮೀಕರಣ

ಬಿಬಿಎಂಪಿ ನಗರದ ಪೂರ್ವ ವಲಯದಲ್ಲಿ ಹೆಚ್ಚು ಸೊಳ್ಳೆ ಉತ್ಪತ್ತಿಯಾಗುವ ಪ್ರದೇಶಗಳನ್ನು ಗುರುತಿಸಿ, ಸೊಳ್ಳೆ ನಿಯಂತ್ರಣಕ್ಕೆ ಧೂಮೀಕರಣ ಮಾಡಲಾಗುತ್ತಿದೆ. ಪಾಲಿಕೆ ಹಳೆಯ ವಲಯಗಳಲ್ಲಿ ಪ್ರತಿ ವಾರ್ಡ್ ಗೆ ಮೂವರು ಹಾಗೂ ಹೊಸ ವಲಯಗಳಲ್ಲಿ ಪ್ರತಿ ವಾರ್ಡ್ ಗೆ ನಾಲ್ವರು ಸಿಬ್ಬಂದಿಯನ್ನು ಸೊಳ್ಳೆ ನಿಯಂತ್ರಣ ಔಷಧಿ ಸಿಂಡಿಸಲು ನಿಯೋಜಿಸಲಾಗಿದೆ. ದೊಡ್ಡ ಮೋರಿಗಳಲ್ಲಿ ಔಷಧಿ ಸಿಂಪಡಿಸಲು ಪ್ರತಿ ಉಪವಿಭಾಗವಾರು ಒಂದು ವಾಹನವನ್ನು ನಿಯೋಜಿಸಲಾಗಿದೆ. ಡೆಂಗಿ, ಚಿಕೂನ್ ಗುನ್ಯ ಪ್ರಕರಣಗಳು ಕಂಡುಬಂದ ಸ್ಥಳದಲ್ಲಿ ಸೊಳ್ಳೆ ನಿಯಂತ್ರಣಕ್ಕೆ ಧೂಮೀಕರಣ ಮಾಡೋದ್ರ ಮೂಲಕ ಖಾಯಿಲೆ ತಡೆಗಟ್ಟಲು ಸೂಕ್ತ ಕ್ರಮ ಕೈಗೊಳ್ಳಲಾಗುತ್ತಿದೆ.

 

ಫ್ರೆಶ್ ನ್ಯೂಸ್

Latest Posts

Featured Videos