ಬಿಬಿಎಂಪಿ ವಿಭಜನೆಗೆ ಮುಂದಾದ ಸಿಎಂ

ಬಿಬಿಎಂಪಿ ವಿಭಜನೆಗೆ ಮುಂದಾದ ಸಿಎಂ

ಬೆಂಗಳೂರು, ಸೆ. 9: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವಿಭಜನೆಗೆ ಬಿಜೆಪಿ ಸರ್ಕಾರ ಮುಂದಾಗಿದೆ. ಈಗಾಗಲೇ ಸಿಎಂ ಬಿ. ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ತೀರ್ಮಾನ ಕೈಗೊಂಡಿದ್ದು, ಇದಕ್ಕಾಗಿ ನಾಲ್ವರು ವಿಶೇಷ ಆಯುಕ್ತರ ನೇಮಕ ಮಾಡಲು ನಿರ್ಧರಿಸಲಾಗಿದೆ. ಬಿಬಿಎಂಪಿಯ 8 ವಲಯಗಳ ಪೈಕಿ 2 ವಲಯಕ್ಕೆ ಒಬ್ಬರು ವಿಶೇಷ ಆಯುಕ್ತರ ನೇಮಕವಾಗಲಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ಯಡಿಯೂರಪ್ಪ ನೇತೃತ್ವದ ಸರ್ಕಾರ ಬಿಬಿಎಂಪಿ ವಿಭನೆಗೆ ಮುಂದಾಗಿದೆ. ಹಿಂದಿನ ಸರ್ಕಾರಗಳು ಕೈಗೊಳ್ಳದ ನಿರ್ಣಯ ಈಗ ಬಿಎಸ್ವೈ ಕೈಗೊಂಡಿದ್ದಾರೆ. ಅಲ್ಲದೇ 198 ವಾರ್ಡ್ಗಳ ಬಿಬಿಎಂಪಿ ವಿಭಜಿಸಿ ಸುಗಮ ಆಡಳಿತ ನಡೆಸಬೇಕೆಂದು ಸರ್ಕಾರದ ಚಿಂತನೆಯಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos