ಮನೆ ಮುಂದೆ ಇನ್ನು ವಾಹನ ನಿಲ್ಲಿಸುವಂತಿಲ್ಲ ಜೋಕೆ!

  • In Metro
  • March 16, 2019
  • 184 Views
ಮನೆ ಮುಂದೆ ಇನ್ನು ವಾಹನ ನಿಲ್ಲಿಸುವಂತಿಲ್ಲ ಜೋಕೆ!

ಬೆಂಗಳೂರಿನಲ್ಲಿ ವಾಹನ ನಿಲುಗಡೆ ವ್ಯವಸ್ಥಾಪನೆ ಹಾಗೂ ನಿರ್ವಹಣೆ ನಿಯಮಾವಳಿಯನ್ನು ಸಾರಿಗೆ ಇಲಾಖೆ ರೂಪಿಸಿದ್ದು, ಇದಕ್ಕೆ ರಾಜ್ಯ ಸರ್ಕಾರ ಅನುಮೋದನೆ ನೀಡಿದೆ. ಶೀಘ್ರವೇ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿಯಮ ಜಾರಿಗೆ ಬರಲಿದ್ದು, ಇನ್ನು ಮುಂದೆ ಮನೆ ಮುಂದೆ ಕಾರು, ಬೈಕ್ ನಿಲ್ಲಿಸಿದಲ್ಲಿ ಶುಲ್ಕ ಕಟ್ಟಬೇಕಿದೆ ಹೇಳಲಾಗಿದೆ. ವಸತಿ ಪ್ರದೇಶದ ಜೊತೆಗೆ ವಾಣಿಜ್ಯ ಪ್ರದೇಶ, ಮುಖ್ಯ ರಸ್ತೆ ಮೊದಲಾದ ಕಡೆಗಳಲ್ಲಿ ಏರಿಯಾವಾರು ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಲಾಗುವುದು.

ಬಿಬಿಎಂಪಿ ವಲಯ ಜಂಟಿ ಆಯುಕ್ತರು ಈ ಬಗ್ಗೆ ಕ್ರಮ ಕೈಗೊಳ್ಳಲಿದ್ದಾರೆ. ಸಂಚಾರ ಠಾಣೆ ಪೊಲೀಸರು, ಸಾರಿಗೆ ಅಧಿಕಾರಿಗಳು ಸೇರಿಕೊಂಡು ಯೋಜನೆ ಸಿದ್ಧಪಡಿಸಿದ್ದಾರೆ. ನಂತರದಲ್ಲಿ ನಿರ್ದಿಷ್ಟ ಸ್ಥಳದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos