ಬಿಬಿಎಂಪಿ ನಿರ್ಲಕ್ಷ್ಯ ದಿಂದ ಪಾದಚಾರಿಗಳಿಗೆ ಚರಂಡಿ ನೀರಿನ ಅಬಿಷೇಕ

ಬಿಬಿಎಂಪಿ ನಿರ್ಲಕ್ಷ್ಯ ದಿಂದ ಪಾದಚಾರಿಗಳಿಗೆ ಚರಂಡಿ ನೀರಿನ ಅಬಿಷೇಕ

ಬೆಂಗಳೂರು, ಸೆ. 17: ಒಪಾರಂ ವೃತ ಎ ಟು ಬಿ ಹೋಟೆಲ್ ಮುಂಬಾಗ ಐಟಿಪಿಎಲ್ ಒಪಾರಂ ಮುಖ್ಯ ರಸ್ತೆಯ ಬಸ್ ನಿಲ್ದಾಣ ಬಳಿ ಚರಂಡಿಯ ನೀರು ಸುಗಮವಾಗಿ ಹರಿಯದೆ ಹೂಳು ತುಂಬಿಕೊಂಡು ಪರಿಣಾಮವಾಗಿ ಚರಂಡಿಯ ಕೊಳಚೆ ನೀರು ನಾಲ್ಕು ರಸ್ತೆಗಳ ಮೇಲೆ ನೀರು ಹರಿಯುತ್ತಿದೆ.

ದಿನಗಳೆ ಕಳೆದರೂ ತೆರವು ಕಾರ್ಯಕ್ಕೆ ಮುಂದಾಗದೆ ಬಿಬಿಎಂಪಿ ಅಧಿಕಾರಿಗಳು ನಿರ್ಲಕ್ಷ್ಯ ತೋರಿದ್ದಾರೆ. ದಿನ ನಿತ್ಯ ಸಾವಿರಾರು ವಾಹನಗಳು ಮತ್ತು ಸಾವಿರಾರು ಸಂಖ್ಯೆಯಲ್ಲಿ ಸಾರ್ವಜನಿಕರು ತಮ್ಮ ದಿನನಿತ್ಯದ ಕೆಲಸಕ್ಕೆ ತೆರಳುವರು ಪಕ್ಕದಲ್ಲಿ  ಇರುವ ಬಸ್ ನಿಲ್ದಾಣದಲ್ಲಿ ಪ್ರಯಾಣ ಬೆಳೆಸಲು ಬಸ್ಗಾಗಿ ಕಾಯುತ್ತ ನಿಲ್ಲಬೇಕಾಗುತ್ತದೆ.

ನೀರಿನ ದುರವಾಸನೆಗೆ ಮೂಗು ಮುಚ್ಚಿ ಕೊಂಡು ನಿಲ್ಲಬೇಕು ದೊಡ್ಡ ವಾಹನಗಳು ಜೋರಾಗಿ ಚಲಿಸಿದರೆ ದ್ವಿಚಕ್ ರ ವಾಹನಗಳ ಸವಾರರು ಮತ್ತು ಪಾದಚಾರಿಗಳ ಮೈಮೇಲೆ ಕೊಳಚ್ಚೆ ನೀರು ಬಿದ್ದು ಕಿರಿ ಕಿರಿ ಉಂಟಾಗಿ ತಮ್ಮ ಕೆಲಸ ಕಾರ್ಯಗಳಿಗೆ ರಜಾ ಹಾಕಿ ಮನೆಗೆ ತೆರಳ ಬೇಕಾಗಿದೆ.

ಅದಿಕಾರಿಗಳ ನಿರ್ಲಕ್ಷ್ಯಕ್ಕೆ ಪಾದಚಾರಿಗಳು ವಾಹನ ಸವಾರರು ಅದಿಕಾರಿಗಳಿಗೆ ಶಾಪ ಹಾಕುತ್ತಿದ್ದಾರೆ. ಸ್ವಚ್ಛ ಭಾರತ ಎಂಬ ಪದದ ಅರ್ಥ ಎನೇಂಬುವುದ ಅದಿಕಾರಿಗಳಿಗೆ ತಿಳಿಯದಾಗೆ ಕಾಣುತ್ತದೆ. ಬಿಬಿಎಂಪಿ ಮಹ ಪೌರರೆ ಆಯುಕ್ತರೆ ನಿಮ್ಮ ಅದಿಕಾರಿಗಳ ನಿರ್ಲಕ್ಷ್ಯಕ್ಕೆ ಕಡಿವಾಣ ಯಾವಾಗ?  ಇಂತಹ ಅದಿಕಾರಿಗಳ ವಿರುದ್ಧ ಕಠಿಣ ಕ್ರಮ ಯಾವಾಗ ಜರಗಿಸುತ್ತಿರಿ. ಜನಪ್ರದಿನಿದಿಗಳೆ ಇತ್ತ ಗಮನ.

ಫ್ರೆಶ್ ನ್ಯೂಸ್

Latest Posts

Featured Videos