ಬಿಬಿಎಂಪಿಯಿಂದ ಮಹತ್ವದ ಸುತ್ತೋಲೆ

ಬಿಬಿಎಂಪಿಯಿಂದ ಮಹತ್ವದ ಸುತ್ತೋಲೆ

ಬೆಂಗಳೂರು, ಜೂ. 2 7 : ಬೃಹತ್ ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಕಸದ ಸಮಸ್ಯೆ ಬೆಂಬಿಡದ ಭೂತವಾಗಿ ಕಾಡುತ್ತಿದೆ. ಹೀಗಾಗಿ ಕೆಲವೊಮ್ಮೆ ಬೆಂಗಳೂರು ಗಾರ್ಡನ್ ಸಿಟಿಯ ಬದಲು, ಗಾರ್ಬೇಜ್ ಸಿಟಿ ಕೂಡ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರಸಿದ್ದಿ ಪಡೆದಿತ್ತು.

ಇದೀಗ ಇಂತಹ ಕಸದ ಸಮಸ್ಯೆಗೆ ಸಾರ್ವಜನಿಕರಿಗೆ ತಿಳಿ ಹೇಳುವ ಮುನ್ನ ಮಾದರಿಯಾಗೋಣ. ನಮ್ಮ ಕಸವನ್ನು ನಾವು ಸರಿ ಮಾಡಿಕೊಂಡು, ಆನಂತರ ಇತರರಿಗೆ ತಿಳಿಸೋಣ ಎನ್ನುವ ದಾರಿಯನ್ನು ಬಿಬಿಎಂಪಿ ಹಿಡಿದಿದೆ.

ನಗರದಲ್ಲಿ ಕಸದ್ದೇ ಎಲ್ಲಿಲ್ಲದ ಸಮಸ್ಯೆ. ಇಂತಹ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಹೊಸ ಹೆಜ್ಜೆಯನ್ನು ಇರಿಸಲು ಹೊರಟಿರುವ ಬಿಬಿಎಂಪಿ, ಕಸ ಕಾಂಪೋಸ್ಟ್ ಕಾರ್ಯವನ್ನು ಅಧಿಕಾರಿ, ನೌಕರರಿಂದಲೇ ಪ್ರಾರಂಭ ಮಾಡುವಂತೆ ಸುತ್ತೋಲೆಯೊಂದನ್ನು ಹೊರಡಿಸಿದೆ.

ಈ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ತಿಳಿ ಹೇಳುವ ಮುನ್ನಾ ಎಲ್ಲ ಸರ್ಕಾರಿ ಅಧಿಕಾರಿಗಳು, ನೌಕರರು ಕಸವನ್ನು ಬೇರ್ಪಡಿಸಿ, ಕಾಂಪೋಸ್ಟ್ ಮಾಡಿ, ಮಾದರಿಯಾಗುವಂತೆ ಬಿಬಿಎಂಪಿ ಮಹತ್ವದ ಸುತ್ತೋಲೆಯೊಂದನ್ನು ಹೊರಡಿಸಿದೆ. ಈ ಸುತ್ತೋಲೆಯ ಅನುಸಾರ ಎಲ್ಲಾ ಅಧಿಕಾರಿಗಳು, ನೌಕರರು ತಮ್ಮ ತಮ್ಮ ಮನೆಯ ಕಸವನ್ನು ಕಡ್ಡಾಯವಾಗಿ ಕಾಂಪೋಸ್ಟ್ ಮಾಡುವುದರ ಜೊತೆಗೆ ಸರ್ಕಾರಿ ಕಚೇರಿಗಳ ಆವರಣದಲ್ಲಿಯೇ ಕಚೇರಿಯ ಹಸಿ ಕಸವನ್ನು ಕಾಂಪೋಸ್ಟ್ ಮಾಡಲು ವ್ಯವಸ್ಥೆ ಮಾಡಿಕೊಳ್ಳಬೇಕೆಂದು ಸುತ್ತೋಲೆಯಲ್ಲಿ ಉಲ್ಲೇಖಿಸಲಾಗಿದೆ.

 

ಫ್ರೆಶ್ ನ್ಯೂಸ್

Latest Posts

Featured Videos