ಉಪ ಮೇಯರ್, ಆಯುಕ್ತರ ಕಾರಬಾರ್

ಉಪ ಮೇಯರ್, ಆಯುಕ್ತರ ಕಾರಬಾರ್

ಬೆಂಗಳೂರು, ಅ. 4 : ಬಿಬಿಎಂಪಿಯಲ್ಲಿ ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ..! ಉಪಮೇಯರ್, ಆಯುಕ್ತರ ‘ಕಾರ್’ಬಾರ್ ಬಿಬಿಎಂಪಿಯಲ್ಲಿ ಯಾರು ಹೇಳೋರು… ಕೇಳೋರು ಇಲ್ಲ. ತಾವು ನಡೆದಿದ್ದೇ ಹಾದಿ ಎಂಬಂತಾಗಿದೆ. ಜನರ ತೆರಿಗೆ ಹಣ ಅಂದರೆ ಇವರಿಗೆ ಕಸಕ್ಕೆ ಸಮಾನವಾದಂತಾಗಿದೆ.
ಸಂತ್ರಸ್ತರಿಗೆ ಪರಿಹಾರ ನೀಡಲು ಸಿಎಂ ರಾಜ್ಯದ ಬೊಕ್ಕಸದಲ್ಲಿ ಹಣ ಇಲ್ಲ ಎಂದು ಹೇಳಿದ್ದಾರೆ. ಬಿಬಿಎಂಪಿ ಅಧಿಕಾರ ವಹಿಸಿಕೊಂಡು ಇನ್ನು 48ಗಂಟೆ ಕಳೆದಿಲ್ಲ. ನಮ್ಮ ಉಪಮೇಯರ್ ಮಹಾಶಯರಿಗೆ 35 ಲಕ್ಷ ವೆಚ್ಚದ ಇನೋವಾ ಕ್ರಿಸ್ಟ್ ಕಾರು ಖರೀದಿಸಲಾಗಿದೆ. ಇನ್ನು ಬಿಬಿಎಂಪಿ ಆಯುಕ್ತರಾದ ಅನಿಲ್ಕುಮಾರ್ಗೂ ಕೂಡ ಇದೇ ಮೊತ್ತದ ಹೊಸ ಕಾರ್ ಅನ್ನು ಖರೀದಿಸಲಾಗಿದೆ. ಈಗಾಗಲೇ ಗುಣಮಟ್ಟದ ಕಾರ್ಗಳಿದ್ದರೂ ಅವುಗಳನ್ನು ಶೆಡ್ಗಳಿಗೆ ಹಾಕಿ ಹೊಸ ಕಾರ್ಗಳನ್ನು ಖರೀದಿ ಮಾಡಿದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos