ಬಂಟ್ವಾಳ ತಾಲೂಕಿನ ವಿದ್ಯಾರ್ಥಿನಿ ರಾಜ್ಯಕ್ಕೆ ದ್ವಿತೀಯ

ಬಂಟ್ವಾಳ ತಾಲೂಕಿನ ವಿದ್ಯಾರ್ಥಿನಿ ರಾಜ್ಯಕ್ಕೆ ದ್ವಿತೀಯ

ಬಂಟ್ವಾಳ, ಏ. 30, ನ್ಯೂಸ್ ಎಕ್ಸ್ ಪ್ರೆಸ್: 2019 ಸಾಲಿನ ಎಸೆಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಬಂಟ್ವಾಳದ ವಿದ್ಯಾಗಿರಿಯ ಎಸ್ ವಿ ಎಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಅನುಪಮಾ ಕಾಮತ್, ವಿಟ್ಲ ಜೇಸಿಸ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಚಿನ್ಮಯ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದಿದ್ದಾರೆ.

ಅನುಪಮಾ ಕಾಮತ್ ಅವರಿಗೆ ಕನ್ನಡ 125, ಗಣಿತ 100, ಸಮಾಜ100, ಸಂಸ್ಕೃತ 100, ಇಂಗ್ಲಿಷ್ 100, ವಿಜ್ಞಾನದಲ್ಲಿ 99 ಅಂಕ ಗಳಿಸುವ ಮೂಲಕ ಒಟ್ಟು 625 ರಲ್ಲಿ 624 ಅಂಕ ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಈಕೆ ಬಿ.ಸಿ.ರೋಡಿನ ವೈದ್ಯ ದಂಪತಿ ಡಾ. ಅನುರಾದ ಕಾಮತ್ ಹಾಗೂ ಡಾ. ದಿನೇಶ್ ಕಾಮತ್ ಅವರ ಪುತ್ರಿ.

ಫ್ರೆಶ್ ನ್ಯೂಸ್

Latest Posts

Featured Videos