ಬಸವಣ್ಣನ ಆದರ್ಶ ಪಾಲಿಸಿ: ಮಲ್ಲಿಕಾರ್ಜುನ ದೇವರು ಸ್ವಾಮಿ

ಬಸವಣ್ಣನ  ಆದರ್ಶ ಪಾಲಿಸಿ: ಮಲ್ಲಿಕಾರ್ಜುನ ದೇವರು ಸ್ವಾಮಿ

ಬೆಂಗಳೂರು, ಜೂ. 26 : ಹನ್ನೆರಡನೇ ಶತಮಾನದ ಮಹಾನ್ ಕ್ರಾಂತಿಕಾರಿ,ಮನುಕುಲದ ಬೆಳಕು ಬಸವಣ್ಣನ ತತ್ವ ಆದರ್ಶಗಳು ಸರ್ವಕಾಲಕ್ಕೂ ಸಲ್ಲುತ್ತವೆ ಸರ್ಪಭೂಷಣ ಮಠದ ಶ್ರೀ  ಪರಮಪೂಜ್ಯ ಶ್ರೀ ಮಲ್ಲಿಕಾರ್ಜುನ ದೇವರು ಮಹಾಸ್ವಾಮಿ ತಿಳಿಸಿದರು.

ಅವರು ಬೊಮ್ಮನಹಳ್ಳಿಯ ಸಿಂಗಸಂದ್ರದಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸಿಂಗಸಂದ್ರ ವಾರ್ಡ್ ಘಟಕದ ವತಿಯಿಂದ ಹಮ್ಮಿಕೊಂಡ ಬಸವ ಜಯಂತೋತ್ಸವ ಸಾಧಕರಿಗೆ ಸನ್ಮಾನ ಸಮಾರಂಭದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದರು.  ಮಹಾನ್ ಮಾನವತಾವಾದಿ ಕ್ರಾಂತಿಕಾರಿ,ಹರಿಕಾರ ಜಸವಣ್ಣ ನವರು ಕಾಯಕವೇ ಕೈಲಾಸ, ಭಕ್ತಿ ಮಾರ್ಗ, ಅನ್ನ ,ಅಕ್ಷರ ದಾಸೋಹ, ಹಾಗೂ ಸಮಾನತೆಯ ಮಾರ್ಗಗಳು ದೇಶದ ಅಭಿವೃದ್ದಿ ಮತ್ತು ನೆಮ್ಮದಿಗೆ ಪೂರಕಪಾಗಿ ನಿಲ್ಲುತ್ತವೆ ಎಂದು ತಿಳಿಸಿದರು.

ಸಿಂಗಸಂದ್ರ ವಾರ್ಡ್ ಘಟಕದ ವತಿಯಿಂದ ಪ್ರತಿ ವರ್ಷವು ಕೊಡಮಾಡುವ ಸಾಧಕರ ಪ್ರಶಸ್ತಿ ಸನ್ಮಾನಕ್ಕೆ 2019 ಸಾಲಿನ ಸಾಧಕರ ಪ್ರಶಸ್ತಿ ಸನ್ಮಾನಕ್ಕೆ ಆಸ್ಪತ್ರೆಯ ದೊಡ್ಡತೋಗೂರಿನ ಸಮಾಜ ಸೇವಕ ಹಾಗೂ ಖ್ಯಾತ ವೈದ್ಯರಾದ ಶ್ರಿÃ ಡಾ.ಶಿವಕುಮಾರ್

ಬಿ.ಸಾರಂಗಮಠ ಅವರನ್ನು ಗುರುತಿಸಿ ಪ್ರಶಸ್ತಿ ಫಲಕ ಹಾಗೂ ಪ್ರಮಾಣ ಪತ್ರ ನೀಡಿ  ಸನ್ಮಾನಿಸಿ ಗೌರವಿಸಲಾಯಿತು.

ಫ್ರೆಶ್ ನ್ಯೂಸ್

Latest Posts

Featured Videos