ಲವ್ ಆಂಡ್ ಲಸ್ಟ್ ಕಾದಂಬರಿಗೆ ತಡೆ

ಲವ್ ಆಂಡ್ ಲಸ್ಟ್ ಕಾದಂಬರಿಗೆ ತಡೆ

ಭೋಪಾಲ್ , ನ. 21 : ಖ್ಯಾತ ಬರಹಗಾರ ಖುಷ್ವಂತ್ ಸಿಂಗ್ ಅವರ, ‘ವುಮೆನ್, ಸೆಕ್ಸ್, ಲವ್ ಆಂಡ್ ಲಸ್ಟ್’ ಕಾದಂಬರಿಯ& ಮಾರಾಟವನ್ನು ನಿಲ್ಲಿಸುವಂತೆ ರೈಲ್ವೆ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಭೋಪಾಲ್ ನಿಲ್ದಾಣದ ಪುಸ್ತಕ ಮಾರಾಟಗಾರರಿಗೆ ಆದೇಶಿಸಿದ್ದಾರೆ. ಇಂತಹ “ಅಶ್ಲೀಲ” ಸಾಹಿತ್ಯವು ಭವಿಷ್ಯದ ಪೀಳಿಗೆಯನ್ನು ಹಾಳುಮಾಡುತ್ತದೆ ಎಂದು ಅವರು ಹೇಳಿದ್ದಾರೆ.
ರೈಲ್ವೆ ಪ್ಯಾಸೆಂಜರ್ ಸರ್ವೀಸಸ್ ಕಮಿಟಿ (ಪಿಎಸ್ಸಿ) ಅಧ್ಯಕ್ಷರಾಗಿರುವ ರಮೇಶ್ ಚಂದ್ರ ರತನ್ ಅವರು ಭೋಪಾಲ್ ರೈಲು ನಿಲ್ದಾಣದಲ್ಲಿ ತಪಾಸಣೆ ನಡೆಸುತ್ತಿದ್ದರು. ಆ ವೇಳೆ ಅಲ್ಲಿನ ಪುಸ್ತಕ ಅಂಗಡಿಯೊಂದರಲ್ಲಿ ಖುಷ್ವಂತ್ ಸಿಂಗ್ ಅವರ ಕಾದಂಬರಿಯನ್ನು ಗಮನಿಸಿದ್ದಾರೆ. ತಕ್ಷಣವೇ ಆ ಪುಸ್ತಕವನ್ನು ಕಪಾಟಿನಿಂದ ತೆಗೆಯುವಂತೆ ಮಾರಾಟಗಾರನಿಗೆ ತಾಕೀತು ಮಾಡಿದ್ದಾರೆ. ಭವಿಷ್ಯದಲ್ಲಿ ಇಂಹಹ&ಪುಸ್ತಕಗಳನ್ನು ಮಾರಾಟಕ್ಕೆ ಇಟ್ಟರೆ ದಂಡ ವಿಧಿಸಲಾಗುವುದು ಎಂದು ಅಂಗಡಿಯವನಿಗೆ ಅಧಿಕಾರಿ ರತನ್ ಎಚ್ಚರಿಕೆ ನೀಡಿದ್ದಾರೆ ಎನ್ನಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos