ಬೀಕರ ಬರಕ್ಕೆ ತುತ್ತಾದ ರಾಗಿ ಕಣಜ 

ಬೀಕರ ಬರಕ್ಕೆ ತುತ್ತಾದ ರಾಗಿ ಕಣಜ 

ಆನೇಕಲ್, ಆ. 8: ಒಂದೆಡೆ ರಾಜ್ಯದ ಬಹುತೇಕ ಕಡೆ ವರುಣ ತನ್ನ ರೌದ್ರ ಅವತಾರವನ್ನು  ತೋರುತ್ತಿದ್ರೆ ಇನ್ನು ಕೆಲವಡೆ ವರುಣರಾಯ ಮೂಣಿಸಿಕೊಂಡು ಬರಗಾಲದ ಛಾಯೆ ಆವರಿಸಿದೆ. ಮಳೆಯನ್ನೆ ನಂಬಿರುವ ರೈತರು ಉಳುಮೆಯನ್ನು ಮಾಡಿ ಮಳೆಗಾಗಿ ಕಾಯುತ್ತಾ ರೈತ ಸಮೂಹ ಭೀಕರ ಬರದಿಂದ ಕಂಗಲಾಗಿದ್ದಾರೆ. ಬರದಿಂದ ತತ್ತರಿಸಿ ಹೋಗಿರುವ ರೈತ ಕುಡಿಯುವ ನೀರಿಗೂ ಪರಿತಪಿಸುವಂತಾಗಿದೆ.

ಹೀಗೆ ಮಳೆ ಇಲ್ಲದೆ ಭೀಕರ ಬರಗಾಲದ ರೀತಿ ಬರುಡ ಭೂಮಿಯಾಗಿರುವ ದೃಶ್ಯಗಳು ಕಂಡು ಬಂದಿದ್ದು,  ಬೆಂಗಳೂರಿನ ಕೂಗಳತೆ ದೂರದಲ್ಲಿರುವ ರಾಗಿ ಕಣಜ ಎಂದೇ ಪ್ರಖ್ಯಾತಿ ಪಡೆದಿರುವ ಆನೇಕಲ್ ತಾಲ್ಲೂಕಿನ ಗಡಿಭಾಗವಾದ ರಾಗಿಹಳ್ಳಿ, ಸಮಂದೂರು, ವಣಕನಹಳ್ಳಿ ಸೇರಿದಂತೆ ಸುತ್ತಮುತ್ತಲಿನ ಹಲವು ಗ್ರಾಮಗಳು. ಹೌದು, ಈ ಬಾರಿ ಕೆಲ ಜಿಲ್ಲೆಗಳಲ್ಲಿ ಮಳೆರಾಯನ ಆರ್ಭಟಕ್ಕೆ ಜನ ಕಂಗಾಲಾಗಿದ್ರೆ ಇನ್ನು ಕೆಲ ಜಿಲ್ಲೆಗಳಲ್ಲಿ ವರುಣರಾಯನ ಮುಣಿಸಿನಿಂದ ರೈತರು ಸೇರಿದಂತೆ ಜನಸಾಮನ್ಯರಿಗೆ ಕುಡಿಯಲು ಸಹ ನೀರಿಲ್ಲದೆ ಪರದಾಡುವಂತಾಗಿದೆ ಕೆಲ ತಿಂಗಳುಗಳಿಂದ ಮಳೆಯಿಲ್ಲದೆ  ಬರಗಾಲ ಆನೇಕಲ್ ತಾಲ್ಲೂಕನ್ನು ಕಾರ್ಮುಗಿಲಂತೆ ಆವರಿಸಿದ್ದು, ರೈತರ ನೆಮ್ಮದಿ ಕೆಡಿಸಿ ಕಂಗಲಾಗುವಂತೆ ಮಾಡಿದೆ. ಈ ಬಾರಿಯು ಸಹ ಮುಂಗಾರು ಮತ್ತು ಹಿಂಗಾರು ಕೈ ಕೊಟ್ಟಿದ್ದು, ಹೊಲ ಗದ್ದೆಗಳಲ್ಲೆಲ್ಲ ಸಂಪೂರ್ಣ ಬರಡು ಭೂಮಿಯಾಗಿದೆ ಇನ್ನು ಇದ್ದ ಕೆರೆ ಕುಂಟೆಗಳಲ್ಲಿ ಒಂದು ಹಾನಿಯು ನೀರಿಲ್ಲದಂತಾಗಿದ್ದು, ದನ ಕರುಗಳನ್ನು ಸಾಗುತ್ತ ಕೃಷಿಯನ್ನೇ ನಂಬಿಕೊಂಡಿದ್ದ ರೈತರಿಗೆ ದಿಕ್ಕೆ ತೊಚಂದತಾಗಿದೆ.

ಇನ್ನು ಆನೇಕಲ್ ತಾಲ್ಲೂಕಿಗೆ 28 ಗ್ರಾಮ ಪಂಚಾಯಿತಿಗಳು ಒಳಗೊಂಡಿದ್ದು ಒಂದೆರೆಡು ಗ್ರಾಮ ಪಂಚಾಯತಿಗಳನ್ನು ಹೊರತುಪಡಿಸಿದ್ರೆ ಇನ್ನುಳಿದ ಎಲ್ಲಾ ಗ್ರಾಮ ಪಂಚಾಯತಿಗಳಲ್ಲಿಯೂ ಭೀಕರ ಬರಗಾಲದಿಂದ ದನಕರುಗಳನ್ನು ಹೈರಾಣಾಗಿಸಿದೆ. ಕಳೆದ ಬಾರಿ ಹಿಂಗಾರು ಮಳೆಯಾಗಿದ್ದರಿಂದ ಕನಿಷ್ಠ ಜಾನುವಾರುಗಳಿಗೆ ಅಲ್ಪ ಸ್ವಲ್ಪ ಮೇವು ಸಿಕ್ಕಿತ್ತು. ಈ ಬಾರಿ ಮುಂಗಾರು ಮತ್ತು ಹಿಂಗಾರು ಮಳೆ ಎರಡು ಕೈ ಕೊಟ್ಟಿದ್ದರಿಂದ ದನಕರುಗಳಿಗೆ ಮೇವು ಸಹ ಸಿಗದೆ ಪರದಾಡುವಂತಾಗಿದ್ದು, ಇನ್ನು ಜನ ಸಾಮಾನ್ಯರಿಗೆ ಕುಡಿಯುವ ನೀರನ್ನು ಪೂರೈಸುವ ಸಲುವಾಗಿ ಕೆಲ ಪಂಚಾಯತಿಗಳಲ್ಲಿ ವಾಟರ್ ಟ್ಯಾಂಕರ್ ಗಳ ಮೂಲಕ ನೀರನ್ನು ಸರಬರಾಜು ಮಾಡುತ್ತಿದ್ದು, ಇದೀಗ ಅವರಿಗೆ ಹಣ ನೀಡದ ಕಾರಣ ಅವರು ಸಹ ನೀರನ್ನು ಸರಬರಾಜು ಮಾಡುವುದನ್ನು ನಿಲ್ಲಿಸಿದ್ದಾರೆ.

ಇನ್ನು ಈ ಬಗ್ಗೆ ಪಂಚಾಯತಿ ಪಿಡಿಓ ಅಧಿಕಾರಿಗಲಾಗಲಿ ಗ್ರಾಮ ಪಂಚಾಯತಿ ಅಧ್ಯಕ್ಷರುಗಲಾಗಲಿ ಯಾರು ಸಹ ತಲೆಕೆಡಿಕೊಳ್ಳದೆ ಇರೋದು ರೈತರಿಗೆ ನುಗ್ಗಲಾರದ ತುತ್ತಾಗಿ ಪರಿಣಮಿಸಿದೆ, ನೀರಿನ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೆಚ್ಚು ಅನುದಾನವನ್ನು ತಂದು ಬರಗಾಲದ ಭೀತಿಯಲ್ಲಿರುವ ರೈತರ ಹಾಗು ಜನಸಾಮಾನ್ಯರ ಕಷ್ಟವನ್ನು ಸರಿಪಡಿಸಬೇಕೆಂಬುದು ಜನರ ಒತ್ತಾಯವಾಗಿದೆ.

ಕುಡಿಯಲು ನೀರು ಇಲ್ಲ

ಒಟ್ನಲ್ಲಿ ಮಳೆ ಇಲ್ಲದೆ ತೀವ್ರ ಬರಗಾಲಕ್ಕೆ ತುತ್ತಾಗಿ ಕುಡಿಯುವ ನೀರಿಗೂ ಪರಿತಪಿಸುವಂತಿದ್ದ ಜನಕ್ಕೆ ಇದೀಗ ಕುಡಿಯುವ ನೀರನ್ನು ನೀಡುತ್ತಿದ್ದ ಖಾಸಗಿ ವಾಟರ್ ಟ್ಯಾಂಕರ್ ಗಳಿಗೆ ಹಣ ನೀಡದ ಕಾರಣ ಅವರು ಸಹ ನೀರನ್ನು ಸರಬರಾಜು ಮಾಡಲು ನಿಲ್ಲಿಸಿರೋದು ಕುಡಿಯುವ ನೀರಿಗಾಗಿ ಕಿಲೋಮೀಟರ್ ಗಟ್ಟಲೆ ತೋಟಗಳಿಗೆ ಹೋಗಿ ನೀರು ತರುವಂತಾಗಿದ್ದು, ಇನ್ನಾದ್ರು ಸಂಬಂದ ಪಟ್ಟ ಜನಪ್ರತಿನಿಧಿಗಳು ಹಾಗು ಸರ್ಕಾರ ಈ ಬಗ್ಗೆ ಗಮನ ಹರಿಸುತ್ತಾರ ಕಾದು ನೋಡ ಬೇಕಿದೆ.

ಫ್ರೆಶ್ ನ್ಯೂಸ್

Latest Posts

Featured Videos