ಲೋಕಸಭೆ ಚುನಾವಣೆ; ಮದ್ಯ ಮಾರಾಟಕ್ಕೆ ಹೊಸ ನಿಯಮ

ಲೋಕಸಭೆ ಚುನಾವಣೆ; ಮದ್ಯ ಮಾರಾಟಕ್ಕೆ ಹೊಸ ನಿಯಮ

ಬೆಂಗಳೂರು, ಮಾ.14, ನ್ಯೂಸ್ ಎಕ್ಸ್ ಪ್ರೆಸ್: ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಆಯೋಗ ಮದ್ಯ ಮಾರಾಟಕ್ಕೆ ಕೆಲವು ನಿಯಮಗಳನ್ನು ವಿಧಿಸಿದೆ.

ಎಲೆಕ್ಷನ್ ಟೈಂನಲ್ಲಿ ಎಣ್ಣೆ ಕೊಟ್ಟೇ ವೋಟು ಹಾಕಿಸಿಕೊಳ್ಳುವ ಜನಪ್ರತಿನಿಧಿಗಳಿಗೆ ಕಡಿವಾಣ ಹಾಕಲು ಚುನಾವಣಾ ಆಯೋಗ ಬಾರ್ ಮಾಲೀಕರಿಗೆ ಈ ಬಾರಿಯ ಲೋಕಸಭಾ ಚುನಾವಣೆಗೆ ಹೊಸ ರೂಲ್ಸ್ ನ್ನು ವಿಧಿಸಿದೆ.

  1. ಬಾರನ್ನು ಬೆಳಗ್ಗೆ 10.30ಕ್ಕೆ ತೆರೆಯಬೇಕು. ರಾತ್ರಿ ನಿಗಧಿತ ಅವಧಿಗೆ ಮುಚ್ಚಬೇಕು. ಬೇಗ ತೆರೆಯೋದು, ಲೇಟಾಗಿ ಮುಚ್ಚೋದು ಮಾಡಿದರೆ ಅಂತಹ ಬಾರ್‍ ಗಳ ಮೇಲೆ ದಂಡ ಪ್ರಯೋಗ
  2. ಪ್ರತಿ ಬಾರ್ ಮೇಲೆ ಕಣ್ಣಿಡಲು ಸ್ಪೆಷಲ್ ಟೀಮ್ ರಚನೆ
  3. ಒಬ್ಬ ವ್ಯಕ್ತಿ 2.3 ಲೀಟರ್‍ನಷ್ಟು ಮದ್ಯ ಖರೀದಿ ಮಾಡಬಹುದು. ಹೆಚ್ಚು ಖರೀದಿಸಿದರೆ ಬಾರ್‍ಗಳ ಲೈಸೆನ್ಸ್‍ಗೆ ಕುತ್ತು. * ನಿತ್ಯ ಬೆಳಗ್ಗೆ ಎಂಟು ಗಂಟೆಯೊಳಗೆ ಮದ್ಯ ಮಾರಾಟ, ವ್ಯಾಪಾರದ ಸಂಪೂರ್ಣ ವಿವರ ನೀಡಬೇಕು. ಡೈಲಿ ವ್ಯಾಪಾರದ ದಾಖಲೆಯನ್ನು ಅಬಕಾರಿಗೆ ಕಳಿಸಬೇಕು.
  4. ಕದ್ದುಮುಚ್ಚಿ ಮದ್ಯ ಮಾರಾಟ ಮಾಡಿದರೆ ಸ್ಪೆಷಲ್ ವಿಂಗ್ಸ್ ಕೈಯಲ್ಲಿ ತಗ್ಲಾಕ್ಕೊಂಡ್ರೆ ಕ್ರಮ.

ಫ್ರೆಶ್ ನ್ಯೂಸ್

Latest Posts

Featured Videos