ಬನ್ನೇರುಘಟ್ಟದಲ್ಲಿ ಮರಿ ಆನೆಗಳ ತುಂಟಾಟ ನೋಡಲು ಎಷ್ಟು ಚಂದಾ!

ಬನ್ನೇರುಘಟ್ಟದಲ್ಲಿ ಮರಿ ಆನೆಗಳ ತುಂಟಾಟ ನೋಡಲು ಎಷ್ಟು ಚಂದಾ!

ಬೆಂಗಳೂರು: ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಡಿಸೆಂಬರ್ ತಿಂಗಳಲ್ಲಿ ಹೊಸ ಅತಿಥಿ ಒಬ್ಬರ ಆಗಮನ ವಾಗಿದೆ.  ಆನೆಯೊಂದು ಹೆಣ್ಣು ಮರಿಗೆ ಜನ್ಮ ನೀಡಿದ್ದು ಜೈವಿಕ ಉದ್ಯಾನವನದಲ್ಲಿ ಸಂತಸ ಮನೆ ಮಾಡಿದೆ. ಈ ಮೂಲಕ ಒಟ್ಟು ಆನೆಗಳ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಹೌದು ದೊಡ್ಡ ದೊಡ್ಡ ಆನೆಗಳ ನಡುವೆ ಪುಟ್ಟದಾಗಿ ಹೆಜ್ಜೆ ಹಾಕಿ ಎಲ್ಲಾ ದೈತೆ ಜೀವಿಗಳನ್ನು ಕೆಣಕುತ್ತಿರುವ ಈ ಮರಿ ಆನೆ ಸಫಾರಿ ಪ್ರಿಯರ ಆಕರ್ಷಣೆಯ ಕೇಂದ್ರ ಬಿಂದುವಾಗಿದೆ. ಇತ್ತೀಚಿಗೆ ಉದ್ಯಾನವನಕ್ಕೆ ಹೊಸ ಹುರುಪು ಕೊಟ್ಟ ಮುದ್ದಾದ ಆನೆಮರಿಯಿಂದ ತಾಯಿ ರೂಪಾಳನ್ನು ಬಿಟ್ಟು ಚಿಕ್ಕಮ್ಮ ದೇವ ದೊಡ್ಡಮ್ಮ, ರೀಟಾಳ ಬಳಿ ಕೂಡ ಇದ್ದು ಆಟ ಮಾಡಿಕೊಂಡಿರುತ್ತದೆ.  ಈ ಮರಿಯ ಜನನ ಮಾವತನಿಗಷ್ಟೇ ಅಲ್ಲದೆ ಉದ್ಯಾನವನಕ್ಕೂ, ಸಿಬ್ಬಂದಿಗೂ ಸಂತೋಷ ಮೂಡಿದೆ.

ಫ್ರೆಶ್ ನ್ಯೂಸ್

Latest Posts

Featured Videos