ಬ್ಯಾಂಕ್ ಡೀಟೆಲ್ಸ್ ಪಡೆದ ಖದೀಮನಿಂದ 40 ಸಾವಿರ ಮಂಗಮಾಯ!

ಬ್ಯಾಂಕ್ ಡೀಟೆಲ್ಸ್ ಪಡೆದ ಖದೀಮನಿಂದ 40 ಸಾವಿರ ಮಂಗಮಾಯ!

ಲಕ್ನೋ, ಏ. 3, ನ್ಯೂಸ್ ಎಕ್ಸ್ ಪ್ರೆಸ್: ಲಕ್ನೋದ ಜಾನಕಿಪುರಂ ನಿವಾಸಿಯ ಜಾಹ್ನವಿ ಎಂಬುವವರು ಮಾ.30 ರಂದು ಆನ್ ಲೈನ್ ನಲ್ಲಿ 4 ಸಿನಿಮಾ ಟಿಕೆಟ್ ಖರೀದಿಸಿದ್ದರು. ಕಾರಣಾಂತರದಿಂದ ಸಿನಿಮಾ ನೋಡಲಾಗದ ಆಕೆ, ನಿಗದಿತ ಸಮಯದ ಒಳಗೆ ಸಿನಿಮಾ ಟಿಕೆಟ್ ರದ್ದುಗೊಳಿಸಿದ್ದಾರೆ. ರದ್ದುಗೊಳಿಸಿದರೂ ಸಹ ಟಿಕೆಟ್ ನ ಹಣ ಅವರ ಬ್ಯಾಂಕ್ ಅಕೌಂಟ್ ಗೆ ವಾಪಾಸಾಗಲಿಲ್ಲ. ತಕ್ಷಣವೇ ಆ ಯುವತಿ ಗೂಗಲ್ ಸರ್ಚ್ ನಲ್ಲಿ ಸಿಕ್ಕ ಕಸ್ಟಮರ್ ಕೇರ್ ಗೆ ಸಂಪರ್ಕಿಸಿದ್ದಾರೆ. ಆದರೆ ಇವರು ಸಂಪರ್ಕಿಸಿದ್ದು, ವಂಚಕರ ನಕಲಿ ಕಸ್ಟಮರ್ ಕೇರ್ ಗೆ. ಹಾಗಾಗಿ ಕಸ್ಟಮರ್ ಕೇರ್ ಪ್ರತಿನಿಧಿ ಎಂದು ಹೇಳಿಕೊಂಡವನು ಸರಿಯಾಗಿ ಉತ್ತರಿಸಿಲ್ಲ. ಇದಾದ ನಂತರ ವೆಬ್ ಸೈಟ್ ನ ಪ್ರತಿನಿಧಿ ಎಂದು ಹೇಳಿಕೊಂಡ ವ್ಯಕ್ತಿಯೋರ್ವ ಯುವತಿ ಮೊಬೈಲಿಗೆ ಫೋನಾಯಿಸಿ ಆಕೆಯ ಬ್ಯಾಂಕ್ ಅಕೌಂಟ್ ವಿವರವನ್ನ ಪಡೆದುಕೊಂಡಿದ್ದಾನೆ. ಬ್ಯಾಂಕ್ ವಿವರಣೆ ನೀಡಿದ ತಕ್ಷಣ ಪ್ರತಿನಿಧಿ ಆ ಕಡೆಯಿಂದ ಮಾತು ಮುಗಿಸಿದ್ದಾನೆ. ತಕ್ಷಣವೇ ಅಕೆಯ ಬ್ಯಾಂಕ್ ಅಕೌಂಟ್ ನಿಂದ 40 ಸಾವಿರ ರೂ. ಹಣ ಮಂಗಮಾಯವಾಗಿದೆ. ಗಾಬರಿಗೊಂಡ ಆಕೆ ಹಲವಾರು ಬಾರಿ ಕಸ್ಟಮರ್ ಕೇರ್ ಪ್ರತಿನಿಧಿಗೆ ಫೋನಾಯಿಸಿದರೂ ಸ್ವಿಚ್ ಆಫ್ ಬಂದಿದೆ. ಇದೀಗ ಲಕ್ನೋ ಸೈಬರ್ ಸೆಲ್ ನಲ್ಲಿ ಈ ಕುರಿತು ದೂರು ದಾಖಲಾಗಿದೆ.

ಫ್ರೆಶ್ ನ್ಯೂಸ್

Latest Posts

Featured Videos