ನಾಳೆಯಿಂದ ಐದು ದಿನ ಬ್ಯಾಂಕ್ ರಜೆ

ನಾಳೆಯಿಂದ ಐದು ದಿನ ಬ್ಯಾಂಕ್ ರಜೆ

ಬೆಂಗಳೂರು: ನಾಳೆಯಿಂದ ಬ್ಯಾಂಕ್‌ಗೆ ಸಾಲು ಸಾಲು ರಜೆ ಬಂದಿದ್ದು, ಒಟ್ಟು 5 ದಿನ ಬ್ಯಾಂಕ್ ವ್ಯವಹಾರಗಳು ಬಂದ್ ಆಗಲಿವೆ. ರಾಷ್ಟ್ರಿಯ ಬ್ಯಾಂಕ್‍ಗಳ ವಿಲೀನ ವಿರೋಧಿಸಿ ಮತ್ತು ನೌಕರರ ವೇತನ ಪರಿಷ್ಕರಣೆಗೆ ಒತ್ತಾಯಿಸಿ ಬಂದ್ ಗೆ ಕರೆ‌ ನೀಡಲಾಗಿದೆ.

 

21 ರಂದು AIBOC (ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಒಕ್ಕೂಟ)  ವತಿಯಿಂದ ಬಂದ್ ಗೆ ಕರೆ ನೀಡಲಾಗಿದೆ. ಇನ್ನೊಂದು ಕಡೆ ಡಿಸೆಂಬರ್ 26 ರಂದು UFBU (ಯುನೈಟೆಡ್ ಫೋರಂ ಆಫ್ ಬ್ಯಾಂಕ್ ಯೂನಿಯನ್)  ವತಿಯಿಂದ ಮುಷ್ಕರಕ್ಕೆ ಕರೆ ನೀಡಲಾಗಿದೆ.

 

ಡಿಸೆಂಬರ್ 21 ಹಾಗೂ 26 ರಂದು ನಡೆಯಲಿರುವ ನೌಕರರ ಮುಷ್ಕರ, ಈ ಮಧ್ಯೆ ಕ್ರಿಸ್ಮಸ್ ಪ್ರಯುಕ್ತ ಸರ್ಕಾರಿ ರಜಾ ಹಿನ್ನಲೆ 3 ದಿನ ಬ್ಯಾಂಕ್ ವ್ಯವಹಾರ ಬಂದ್ ಆಗಲಿದೆ. ಡಿಸೆಂಬರ್ 22ರಂದು 4ನೇ ಶನಿವಾರ, 23 ಭಾನುವಾರ, 25 ಕ್ರಿಸ್ ಮಸ್ ರಜೆ ಹಿನ್ನಲೆ ಬ್ಯಾಂಕ್ ವ್ಯವಹಾರಗಳು ಬಂದ್ ಇರಲಿವೆ.

ಡಿಸೆಂಬರ್ 24 ಹೊರತು ಪಡಿಸಿ ಡಿ.21ರಿಂದ 26ರ ವರೆಗೆ ರಜೆ ಇರುವ ಇದೆ. ಆದ ಕಾರಣ, ಎಟಿಎಂಗಳಲ್ಲಿ ನಗದು ಕೊರತೆ ಸಾಧ್ಯತೆ ಇದೆ. ಬಾಂಕ್ ಗ್ರಾಹಕರು ಈಗಲೇ ಎಚ್ಚೆತ್ತುಕೊಂಡು ತಮಗೆ ಬೇಕಾದ ಬ್ಯಾಂಕ್ ವ್ಯವಹಾರಗಳನ್ನು ಮುಗಿಸಿ ಕೊಳ್ಳುವುದು ಒಳಿತು.

ಫ್ರೆಶ್ ನ್ಯೂಸ್

Latest Posts

Featured Videos