ಬೆಂಳೂರಿನಲ್ಲಿ ಭಾರೀ ಅವಾಂತರ!

ಬೆಂಳೂರಿನಲ್ಲಿ ಭಾರೀ ಅವಾಂತರ!

ಬೆಂಗಳೂರು, ಜು. 10: ಅಕ್ಕಪಕ್ಕದ ಎರಡು ಬಹುಮಹಡಿ ಕಟ್ಟಡದ ಬೇಸ್ ಮೆಂಟ್ ಕುಸಿದ ಹಿನ್ನೆಲೆ ಪಕ್ಕದ ಕಟ್ಟಡದ ಮೇಲೆ ವಾಲಿದ ಎರಡು ಬಹುಮಹಡಿ ಕಟ್ಟಡಗಳು. ಬೆಂಗಳೂರಿನ ಪುಲಿಕೇಶಿನಗರದ ವೀಲರ್ಸ್ ರಸ್ತೆ ಸಮೀಪದ ಕುಕ್ ಟೌನ್ ಎರಡನೆ ಕ್ರಾಸ್ ಹಚಿನ್ಸ್ ರಸ್ತೆಯಲ್ಲಿ ಬಳಿ ಘಟನೆ ನಡೆದಿದೆ.

ಕಟ್ಟಡ ನಿರ್ಮಾಣಕ್ಕೆ ಕಳಪೆ ವಸ್ತುಗಳ ಬಳಕೆಯೇ  ಈ ಘಟನೆ ಕಾರಣ ಎನ್ನಲಾಗಿದದ್ದು, ಎರಡು ಬಹುಮಹಡಿ ಕಟ್ಟಡಗಳ ಅಪಾರ್ಟ್ಮೆಂಟ್ ಗಳಲ್ಲಿ ವಾಸವಿದ್ದ ನಿವಾಸಿಗಳು ಪ್ರಾಣಾಆಪಾಯದಿಂದ ಪಾರಾಗದ್ದಾರೆ.

ಈ ಘಟನೆಯಲ್ಲಿ ಏಳು ಜನ ಅವಶೇಷದಡಿ ಸಿಲುಕಿರುವ ಶಂಕೆ ಮೂಡಿ ಬಂದಿದೆ. ಒಟ್ಟು ಮೂರು ಜನರನ್ನು ರಕ್ಷಿಸಿ, ಆಸ್ಪತ್ರೆಗೆ ಶಿಫ್ಟ್ ಮಾಡಿದ ಅಗ್ನಿಶಾಮಕ ಸಿಬ್ಬಂದಿ ನಿನ್ನೆ ತಡ ರಾತ್ರಿ 1-30 ರ ಸುಮಾರಿಗೆ ನಡೆದಿರುವ ಘಟನೆ. ನಾಲ್ಕು ಅಂತಸ್ತಿನ ಸಾಯಿ ಆದಿ ಅಂಬಾಲ್ ಅಪಾರ್ಟ್ಮೆಂಟ್ ನಿರ್ಮಾಣ ಹಂತದ ಇನ್ನೊಂದು ಮೂರಂಸ್ತಿನ ಕಟ್ಟಡ ಕುಸಿತ ನಿರ್ಮಾಣ ಹಂತದ ಕಟ್ಟಡದಲ್ಲಿ ನಾಲ್ಕು ಜನ ಸಿಲುಕಿರುವ ಶಂಕೆ.

ಕಳಪೆ ಕಾಮಗಾರಿಯೆ ಈ ದುರಂತಕ್ಕೆ ಕಾರಣ ಎನ್ನಲಾಗಿದ್ದು, ಮೊದಲಿಗೆ ಮೂರಂತಸ್ತಿನ ಕಟ್ಟಡ ಕುಸಿದಿದೆ. ಕೆಲ ಹೊತ್ತಿನಲ್ಲೇ ಪಕ್ಕದಲ್ಲಿದ್ದ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ರಕ್ಷಣಾ ಕಾರ್ಯಾಚರಣೆ ನಡೆಸುತ್ತಿರುವ ಅಗ್ನಿಶಾಮಕ ಸಿಬ್ಬಂದಿ ಗಾಯಾಳುಗಳನ್ನು ಬೌರಿಂಗ್ ಆಸ್ಪತ್ರೆಗೆ ಸೇರಿಸಿದ್ದಾರೆ. ಇನ್ನು ಏಳು ಮಂದಿ ಸಿಲುಕಿಕೊಂಡಿರುವ ಹಿನ್ನೆಲೆಯಲ್ಲಿ ಅವರ ರಕ್ಷಣಾ ಕಾರ್ಯ ನಡೆದಿದೆ.

 

 

ಫ್ರೆಶ್ ನ್ಯೂಸ್

Latest Posts

Featured Videos