ಬಾಂಗ್ಲಾ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂಗ್ಲೆಂಡ್ ಸಜ್ಜು

 ಬಾಂಗ್ಲಾ ವಿರುದ್ಧ ಸೇಡು ತೀರಿಸಿಕೊಳ್ಳಲು ಇಂಗ್ಲೆಂಡ್ ಸಜ್ಜು

ಕಾರ್ಡಿಫ್‌, ಜೂನ್. 8, ನ್ಯೂಸ್ ಎಕ್ಸ್ ಪ್ರೆಸ್: 2015ರ ಏಕದಿನ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ ಗುಂಪು ಹಂತದಲ್ಲೇ ಸೋತು ಹೊರಬಿದ್ದಿತ್ತು. ಇಂಗ್ಲೆಂಡ್‌ ಮೊದಲ ಸುತ್ತಲ್ಲೇ ನಿರ್ಗಮಿಸಲು ಬಾಂಗ್ಲಾದೇಶ ಸಹ ಕಾರಣ. ಅಡಿಲೇಡ್‌ನಲ್ಲಿ ನಡೆದಿದ್ದ ಪಂದ್ಯದಲ್ಲಿ ಬಾಂಗ್ಲಾ, ಇಂಗ್ಲೆಂಡ್‌ಗೆ 15 ರನ್‌ಗಳ ಸೋಲುಣಿಸಿತ್ತು. ಆ ಸೋಲಿನ ಬಳಿಕ ಹಠಕ್ಕೆ ಬಿದ್ದಂತೆ ಹೋರಾಡಿದ ಇಂಗ್ಲೆಂಡ್‌, 2019ರ ಐಸಿಸಿ ಏಕದಿನ ವಿಶ್ವಕಪ್‌ಗೆ ಬಲಿಷ್ಠ ತಂಡ ಸಿದ್ಧಪಡಿಸಿ ಕಣಕ್ಕಿಳಿದಿದೆ. ಬಾಂಗ್ಲಾ ವಿರುದ್ಧ 4 ವರ್ಷಗಳ ಹಿಂದೆ ಅನುಭವಿಸಿದ ಸೋಲಿಗೆ ಸೇಡು ತೀರಿಸಿಕೊಳ್ಳಲು ಇಂಗ್ಲೆಂಡ್‌ ಹಾತೊರೆಯುತ್ತಿದೆ. ಒಟ್ಟಾರೆ ಮುಖಾಮುಖಿಯಲ್ಲಿ ಬಾಂಗ್ಲಾದೇಶದ ಮೇಲೆ ಇಂಗ್ಲೆಂಡ್‌ ಪ್ರಾಬಲ್ಯ ಸಾಧಿಸಿದ್ದರೂ, ವಿಶ್ವಕಪ್‌ನಲ್ಲಿ ಮಾತ್ರ ಹಿನ್ನಡೆ ಕಂಡಿದೆ. ಆಡಿರುವ 3 ಪಂದ್ಯಗಳಲ್ಲಿ 2ರಲ್ಲಿ ಸೋತಿದೆ. 2011ರ ವಿಶ್ವಕಪ್‌ನಲ್ಲೂ ಬಾಂಗ್ಲಾ ವಿರುದ್ಧ ಇಂಗ್ಲೆಂಡ್‌ ಸೋಲುಂಡಿತ್ತು. ಬಾಂಗ್ಲಾದೇಶ, ನ್ಯೂಜಿಲೆಂಡ್‌ ವಿರುದ್ಧ ವೀರೋಚಿತ ಸೋಲು ಕಂಡಿತ್ತು. ಟೂರ್ನಿಯಲ್ಲಿ ಕೆಲ ಅಚ್ಚರಿಯ ಫಲಿತಾಂಶಗಳನ್ನು ನೀಡಿ ಸೆಮಿಫೈನಲ್‌ಗೇರುವ ಮಹದಾಸೆ ಹೊಂದಿರುವ ಬಾಂಗ್ಲಾ ಹುಲಿಗಳು, ಆತಿಥೇಯರನ್ನು ಬೇಟೆಯಾಡುವ ಕನಸು ಕಾಣುತ್ತಿವೆ.

ಫ್ರೆಶ್ ನ್ಯೂಸ್

Latest Posts

Featured Videos